17 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ನಾಯಿ ಶವ ಪತ್ತೆ

Public TV
1 Min Read
Raichuru Dog Water

ರಾಯಚೂರು: ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ನಾಯಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಬಿಚ್ಚಾಲಿ (Bichali) ಗ್ರಾಮದಲ್ಲಿ ನಡೆದಿದೆ.

ಒಟ್ಟು 17 ಗ್ರಾಮಗಳಿಗೆ ನೀರನ್ನು ಪೂರೈಸಲಾಗುವ ಶುದ್ದೀಕರಣ ಘಟಕದಕಲ್ಲಿ ಈ ಘಟನೆ ನಡೆದಿದ್ದು, ನೀರನ್ನು ಕುಡಿದ ಜನರು ಕಂಗಾಲಾಗಿದ್ದಾರೆ.ಇದನ್ನೂ ಓದಿ: ಉಡುಪಿ| ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ – ಹಿಂದೂ ಸಂಘಟನೆಗಳ ಅಸಮಾಧಾನ

ಕಳೆದ ಮೂರು ದಿನಗಳ ಹಿಂದೆ ನಾಯಿ ಸತ್ತು ಬಿದ್ದಿದ್ದು, ನೀರು ಕುಡಿದ ಜನರಲ್ಲಿ ವಾಂತಿ ಭೇದಿ ಅನುಭವ ಉಂಟಾಗಿತ್ತು. ಸದ್ಯ ನೀರಿನ ಟ್ಯಾಂಕರ್ ಶುದ್ಧೀಕರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಸಿಬ್ಬಂದಿ ಸಂಪೂರ್ಣ ಪಾಚಿಗಟ್ಟಿದ ನೀರನ್ನೇ ಜನರಿಗೆ ಕುಡಿಯಲು ಸರಬರಾಜು ಮಾಡುತ್ತಾರೆ. ಜೊತೆಗೆ ನೀರಿನ ಶುದ್ಧೀಕರಣ ಘಟಕ ನಿರ್ವಹಣೆಗೆ ವರ್ಷಕ್ಕೆ ಲಕ್ಷಾಂತರ ಅನುದಾನವಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು

 

Share This Article