ಕೊಪ್ಪಳ: ಸಾಮಾನ್ಯವಾಗಿ ಜನರು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದೇ ಕಡಿಮೆಯಾಗಿದೆ. ಆದರೆ ಜಿಲ್ಲೆಯಲ್ಲಿ ಮುದ್ದಾಗಿ ಸಾಕಿದ ನಾಯಿಯ ಹುಟ್ಟು ಹಬ್ಬವನ್ನ ಕುಟುಂಬದವರು ಆಚರಣೆ ಮಾಡಿದ್ದಾರೆ.
ನಗರದ ಬಿ.ಟಿ.ಪಾಟೀಲ್ ಬಡಾವಣೆಯ ನಿವಾಸಿಗಳಾದ ಸೌಮ್ಯ ಎಂಬವರು ಅಕ್ಕರೆಯಿಂದ ಸಾಕಿದ ನಾಯಿಯ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೇ ಕೇಕ್ ಕಟ್ ಮಾಡಿ ನಾಯಿಯ ಹುಟ್ಟು ಹಬ್ಬ ಆಚರಣೆ ಮಾಡಿದ್ದು, ಬರ್ತ್ ಡೇಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸೌಮ್ಯ ಅವರು ಕಳೆದ ನಾಲ್ಕು ವರ್ಷಗಳಿಂದಲೂ ನಾಯಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗದಿಂದ 4,500 ರೂ. ಹಣ ಕೊಟ್ಟು ನಾಯಿಯನ್ನ ತಂದಿರುವ ಸೌಮ್ಯ ಅದಕ್ಕೆ ರಚ್ಚು ಎಂದು ಹೆಸರು ಇಟ್ಟಿದ್ದಾರೆ. ರಚ್ಚು ಮನೆಯ ಸದಸ್ಯರಲ್ಲಿ ಒಬ್ಬ ಎಂದುಕೊಂಡ ಸೌಮ್ಯ ಪ್ರತಿ ವರ್ಷ ಗ್ರ್ಯಾಂಡ್ ಆಗಿ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದಾರೆ.
ಮನುಷ್ಯರ ಹುಟ್ಟು ಹಬ್ಬದ ಆಚರಣೆಯಂತೆ ಮೂಕ ಪ್ರಾಣಿಯ ಹುಟ್ಟುಹಬ್ಬ ಆಚರಣೆ ಮಾಡಿದ್ದು ವಿಶೇಷವಾಗಿದೆ. ನಾಯಿಗೆ ಡ್ರೆಸ್, ಹೂ ಮುಡಿಸಿ ಮೇಕಪ್ ಮಾಡಿದ್ದಾರೆ. ಬಳಿಕ ಚೇರ್ ಮೇಲೆ ಕೂರಿಸಿ ಕೇಕ್ ಕಟ್ ಮಾಡಿಸಿ ಅದಕ್ಕೆ ತಿನ್ನಿಸುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv