ನ್ಯೂಯಾರ್ಕ್: ನಾಯಿಯೊಂದು 3 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ಘಟನೆ ನ್ಯೂಯಾರ್ಕ್‍ನಲ್ಲಿ ನಡೆದಿದ್ದು ಇದೀಗ ಇದರ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ರಾಕ್‍ಲ್ಯಾಂಡ್ ಕೌಂಟಿಯ ಸ್ಪ್ರಿಂಗ್ ವ್ಯಾಲಿ ನಿವಾಸದ ಹೊರಗೆ 3 ವರ್ಷದ ಬಾಲಕ ತನ್ನ ಗೆಳೆಯರೊಂದಿಗೆ ಆಟವಾಡ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಕಪ್ಪು ಬಣ್ಣದ ಪೀಟ್‍ಬುಲ್ ನಾಯಿಯೊಂದು ಬಾಲಕನ ಮೇಲೆ ದಾಳಿ ಮಾಡಿದೆ. ಬಾಲಕನನ್ನು ರಸ್ತೆಯಲ್ಲೇ ಕಚ್ಚಿ ಎಳೆದಾಡಿದೆ. ಬಾಲಕ ನಾಯಿಯಿಂದ ತಪ್ಪಿಸಿಕೊಂಡು ತೆವಳಿಕೊಂಡೇ ಹೋಗಲು ಯತ್ನಿಸಿದ್ರೂ ಮತ್ತೊಮ್ಮೆ ಅದು ಆತನ ಮೇಲೆ ದಾಳಿ ಮಾಡುತ್ತದೆ. ಸ್ಥಳದಲ್ಲಿದ್ದವರು ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
Advertisement
Advertisement
ಕೊನೆಗೆ ಕೆಲವರು ಬಂದು ನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಾಲಕನನ್ನು ರಕ್ಷಿಸಿದ್ದಾರೆ. ನಾಯಿ ದಾಳಿಯಿಂದ ಬಾಲಕನ ಕುತ್ತಿಗೆ ಹಾಗು ಕೆನ್ನೆಯ ಮೇಲೆ ಗಾಯಗಳಾಗಿವೆ.
Advertisement
ನಾಯಿಯ ಮಾಲೀಕ ಅದರ ಕುತ್ತಿಗೆಗೆ ಬೆಲ್ಟ್ ಹಾಕದೆ ಕಳೆದ ಹಲವು ವಾರಗಳಿಂದ ಹಾಗೇ ಬಿಟ್ಟಿದ್ದಾರೆ. ಈ ಬಗ್ಗೆ ಸ್ಪ್ರಿಂಗ್ ವ್ಯಾಲಿ ಪೊಲೀಸರಿಗೆ ಅನೇಕ ಬಾರಿ ಮಾಹಿತಿ ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ಕೌನ್ಸಿಲ್ ಹೇಳಿರುವುದಾಗಿ ವರದಿಯಾಗಿದೆ.
Advertisement