ಮುಂಬೈ: ಬೀದಿ ನಾಯಿಯೊಂದು ಒಂದೇ ದಿನ 34 ಮಂದಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಥಾಣೆಯ ಸಾರ್ವಕರ್ ನಗರದಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ನಾಯಿ ಜನರ ಮೇಲೆ ದಾಳಿ ಮಾಡಿತ್ತು. ಅದೇ ದಿನ ಸಂಜೆ ಇಂದಿರಾ ನಗರ ಪ್ರದೇಶದಿಂದ ನಾಯಿಯನ್ನು ಹಿಡಿಯಲಾಯಿತು ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಂ ತಿಳಿಸಿದ್ದಾರೆ.
Advertisement
Advertisement
ನಾಯಿ ದಾಳಿಯಿಂದಾಗಿ ನಗರದ ಜನರು ಭಯಭೀತರಾಗಿದ್ದಾರೆ. ರಸ್ತೆಯಲ್ಲಿ ಹಾದು ಹೋಗುವವರ ಮೇಲೆ ನಾಯಿ ದಾಳಿ ಮಾಡುತ್ತಿತ್ತು. ಕೆಲವು ಮಕ್ಕಳ ಮೇಲೂ ನಾಯಿ ದಾಳಿ ಮಾಡಿದೆ. ನಂತರ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವು ಎಂದು ಪ್ರತ್ಯಕ್ಷದರ್ಶಿ ರಾಜು ಹೇಳಿದ್ದಾರೆ. ಇದನ್ನೂ ಓದಿ: ತೊಟ್ಟಿಲಲ್ಲಿ ಮಲಗಿದ್ದ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿದ ಅಕ್ಕ
Advertisement
Advertisement
ನಾಯಿ ಗಾಯಗೊಂಡಿದೆ ಅನ್ನಿಸುತ್ತದೆ. ಹೀಗಾಗಿ ಜನರ ಮೇಲೆ ದಾಳಿ ಮಾಡಿದೆ. ಮನುಷ್ಯರ ಮೇಳೆ ದಾಳಿ ಮಾಡುತ್ತಿದ್ದ ನಾಯಿಯನ್ನು ಕೊನೆಗೂ ಸಂಜೆ ವೇಳೆಗೆ ಹಿಡಿಯಲಾಗಿದೆ. ನಾಯಿಯ ದಾಳಿಯಿಂದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ವಿವಿಧ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಶಿವಸೇನೆ ಕಾರ್ಪೊರೇಟರ್ ಹೇಳಿದ್ದಾರೆ. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ