ಕೆಆರ್ ಪೇಟೆಯಲ್ಲಿ ಒಂದೇ ದಿನ ನಾಲ್ವರು ಮಕ್ಕಳಿಗೆ ಕಚ್ಚಿತು ನಾಯಿ- ತಾಯಿ ಜೊತೆ ಇದ್ದ ಮಕ್ಕಳನ್ನು ಬಿಡಲಿಲ್ಲ

Public TV
1 Min Read
dogs 1

ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಹುಚ್ಚು ನಾಯಿ ಹಾವಳಿಯನ್ನು ನಿಯಂತ್ರಿಸದ್ದಕ್ಕೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ಐವರು ಮಕ್ಕಳು ಸೇರಿ ಒಟ್ಟು ಏಳು ಜನರಿಗೆ ನಾಯಿ ಕಚ್ಚಿವೆ. ಇಂದು ಒಂದೇ ದಿನದಲ್ಲಿ ಕೆಆರ್ ಪೇಟೆಯ ಸುಭಾಷ್‍ನಗರದಲ್ಲಿ ನಾಲ್ವರು ಮಕ್ಕಳು ಸೇರಿ ಓರ್ವ ಮಹಿಳೆ ಮೆಲೆ ನಾಯಿಯೊಂದು ಏಕಾಏಕಿ ದಾಳಿ ಮಾಡಿದೆ.

mnd dog attack

ತಾಯಿ ಜೊತೆ ಇದ್ದ ಮಕ್ಕಳನ್ನೂ ಬಿಡದೇ ನಾಯಿ ಕಚ್ಚಿದೆ. ನಾಯಿ ಕಚ್ಚಿದ ಪರಿಣಾಮ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನುಳಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಾಳಿ ಮಾಡಿರುವ ನಾಯಿಗೆ ಬಹುಶಃ ಹುಚ್ಚು ಹಿಡಿದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಜಿಲ್ಲೆಯಲ್ಲಿ ನಾಯಿ ಕಾಟ ಹೆಚ್ಚಾಗಿದ್ದು, ನಾಯಿ ದಾಳಿಗೆ ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ. ನಗರದಲ್ಲಿ ನಾಯಿಗಳ ದಾಳಿ ನಿರಂತರವಾಗಿ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳದೇ ಪುರಸಭೆ ಸದಸ್ಯರು, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *