ಶಿವಮೊಗ್ಗ: ಶ್ವಾನ ಮತ್ತು ಬೆಕ್ಕು ಎಂದರೆ ಬಹಳಷ್ಟು ಜನರಿಗೆ ಎಲ್ಲಿಲ್ಲದ ಪ್ರೀತಿ. ಅಂತಹ ಶ್ವಾನ ಹಾಗೂ ಬೆಕ್ಕು ಪ್ರಿಯರಿಗಾಗಿಯೇ ಶಿವಮೊಗ್ಗದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.
ಬಣ್ಣ ಬಣ್ಣದ ಉದ್ದ ಕೂದಲಿನ ಬೆಕ್ಕುಗಳು, ಪ್ರೀತಿಯಿಂದ ತಲೆ ಸವರಿದರೆ ಬಾಲ ಅಲ್ಲಾಡಿಸುವ ನಾನಾ ತಳಿಯ ಶ್ವಾನಗಳು ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಡಾಗ್ ಮತ್ತು ಕ್ಯಾಟ್ ಶೋ ಜನಮನ ಸೆಳೆಯಿತು. ವಿನೋಬನಗರದ ಡಿವಿಎಸ್ ಕಾಲೇಜಿನ ಆವರಣದಲ್ಲಿ ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಡಾಗ್ ಮತ್ತು ಕ್ಯಾಟ್ ಶೋ ಆಯೋಜಿಸಲಾಗಿತ್ತು.
Advertisement
Advertisement
ರಾಜ್ಯದ ವಿವಿಧೆಡೆಗಳಿಂದ ವಿವಿಧ ತಳಿಯ ಸುಮಾರು 250ಕ್ಕೂ ಅಧಿಕ ನಾಯಿ ಹಾಗೂ ಬೆಕ್ಕುಗಳು ಶೋನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದವು. ಪ್ರದರ್ಶನದಲ್ಲಿ ದೇಶಿ ತಳಿಯ ಶ್ವಾನಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಆದರೆ ವಿದೇಶಿ ತಳಿಯ ಶ್ವಾನಗಳಿಗೆ ಪ್ರತಿಯೊಂದು ಶ್ವಾನಕ್ಕೂ 350 ರೂ. ಪ್ರವೇಶ ದರ ನಿಗದಿಪಡಿಸಲಾಗಿತ್ತು.
Advertisement
ಜನರು ವಿವಿಧ ಬಗೆಯ ಶ್ವಾನ ನೋಡಲು ಮುಗಿಬಿದ್ದರು. ಆಯೋಜಕರು ಕರೆದಾಗ ಶ್ವಾನಗಳು ಬಂದು ಪ್ರದರ್ಶನ ಕೊಡುತ್ತಿದ್ದವು. ಪ್ರದರ್ಶನದಲ್ಲಿ ದೇಶಿ, ವಿದೇಶಿ ತಳಿಯ ಸುಮಾರು 250ಕ್ಕೂ ಶ್ವಾನ ಹಾಗೂ ಬೆಕ್ಕುಗಳು ಭಾಗಿಯಾಗಿ ಜನರಿಗೆ ಸಖತ್ ಎಂಜಾಯ್‍ಮೆಂಟ್ ನೀಡಿದವು.
Advertisement
ಪ್ರದರ್ಶನದಲ್ಲಿ ನಾನಾ ತಳಿಯ ಬೆಕ್ಕು, ಶ್ವಾನಗಳನ್ನು ಕಂಡ ಪ್ರಾಣಿ ಪ್ರಿಯರು ಅವುಗಳನ್ನು ಎತ್ತಿ ಮುದ್ದಾಡಿದರು. ಹಲವರು ತಮ್ಮ ನೆಚ್ಚಿನ ಶ್ವಾನ, ಬೆಕ್ಕು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದರೆ, ಮಕ್ಕಳಂತೂ ನಾಯಿ ಬೆಕ್ಕುಗಳನ್ನು ಮುಟ್ಟಿ ಖುಷಿಪಟ್ಟರು.