Connect with us

Bengaluru City

ಯಶ್ ಅಭಿನಯದ ಕೆಜಿಎಫ್ ಪಾರ್ಟ್ 2 ಬರುತ್ತಾ?

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಗಾಂಧಿ ನಗರದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದು, ಅಭಿಮಾನಿಗಳೆಲ್ಲಾ ಸಿನಿಮಾ ಯಾವಾಗ ತೆರೆಕಾಣುತ್ತೆ ಅಂತಾ ಕಾತುರದಿಂದ ಕಾಯುತ್ತಿದ್ದಾರೆ.

ಕೆಜಿಎಫ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರೆ, ಇತ್ತ ಸಿನಿಮಾ ಇನ್ನೊಂದು ಭಾಗ ಬರಲಿದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಸಿನಿಮಾದ ಪೂರ್ಣ ಕಥೆಯನ್ನು ಒಂದೇ ಭಾಗದಲ್ಲಿ ಹೇಳಲು ಸಾಧ್ಯವಾಗದ ಕಾರಣ, ಕೆಜಿಎಫ್-2 ನಿರ್ಮಾಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಫಸ್ಟ್ ಲುಕ್ ನಿಂದಲೇ ಸಿನಿಮಾ ಬಗ್ಗೆ ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಯಶ್ 80ರ ದಶಕದ ಡಾನ್ ಪಾತ್ರಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಾಗಿ ಅದ್ಧೂರಿ ವೆಚ್ಚದಲ್ಲಿ ಕೋಲಾರ ಕೆಜಿಎಫ್ ನಲ್ಲಿ 70ರ ದಶಕದ ಸೆಟ್ ಹಾಕಿ ಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ. ಸಿನಿಮಾಗಾಗಿ ಯಶ್ ತಮ್ಮ ಲುಕ್ ನ್ನು ಸಹ ಬದಲಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕೆಜಿಎಫ್ ಸಿನಿಮಾ ಕನ್ನಡ ಅಲ್ಲದೇ ಹಿಂದಿ, ತೆಲಗು, ತಮಿಳು ಭಾಷೆಗಳಿಗೆ ಡಬ್ ಆಗಲಿದೆ. ಬಹು ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ಕೆಜೆಎಫ್ ತೆರೆಯ ಮೇಲೆ 80ರ ದಶಕದ ನೈಜ ಚಿತ್ರಣವನ್ನು ತೆರೆಯ ಮೇಲೆ ತರಲು ಪ್ರಯತ್ನ ಮಾಡುತ್ತಿದೆ. ಸಿನಿಮಾಗಾಗಿ ತಮ್ಮ ಲುಕ್ ಬದಲಿಸಿರುವ ಯಶ್ 80ರ ದಶಕದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಅವರಿಗಾಗಿ ವಿಶೇಷ ವಸ್ತ್ರ ವಿನ್ಯಾಸವನ್ನು ಮಾಡಲಾಗಿದೆ.

 

Click to comment

Leave a Reply

Your email address will not be published. Required fields are marked *