ಬಿಗ್‌ಬಾಸ್ (Bigg Boss Kannada 12) ಮನೆಯಲ್ಲಿ ಗಿಲ್ಲಿನಟನ (Gilli Nata) ಮೇಲೆ ರಿಷಾ (Risha Gowda) ಕೋಪದಲ್ಲಿ ಕೈ ಮಾಡಿದ್ರು. ಇದೀಗ ಮನೆಯಿಂದ ಹೊರ ಬಂದ ರಿಷಾ ಗೌಡ ಗಿಲ್ಲಿ ಮೇಲೆ ಹಲ್ಲೆ ಮಾಡಿರುವ ವಿಚಾರಕ್ಕೆ ನೇರ ಉತ್ತರ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ರಿಷಾ `ನಾನು ಗಿಲ್ಲಿ ಮೇಲೆ ಹಲ್ಲೆ ಮಾಡಿಲ್ಲ, ಸಲುಗೆಯಿಂದ ಆಗಿರುವ ಘಟನೆ ಅದು. ಹೀಗಾಗಿ ಆ ಘಟನೆ ಕುರಿತು ರಿಗ್ರೆಟ್ ಆಗುವಂಥಹ ವಿಷಯವೇ ಇಲ್ಲ’ ಎಂದು ಉತ್ತರಿಸಿದ್ದಾರೆ.
ಬಿಗ್‌ಬಾಸ್ ಕಾರ್ಯಕ್ರಮದ ನಿಯಮದ ಪ್ರಕಾರ ಓರ್ವ ಸ್ಪರ್ಧಿ ಮೇಲೆ ಇನ್ನೋರ್ವ ಸ್ಪರ್ಧಿ ಕೈ ಮಾಡಿದ್ದಲ್ಲಿ ಆ ಕ್ಷಣವೇ ಅವರು ಕೈ ಮಾಡಿದ ವ್ಯಕ್ತಿ ಮನೆಯಿಂದ ಹೊರಬರಬೇಕು. ಆದರೆ ರಿಷಾ ಗೌಡ ಕೋಪದಿಂದ ನಿಧಾನವಾಗಿ ಗಿಲ್ಲಿಗೆ ಹೊಡೆದು ಸುದ್ದಿಯಾದ್ರು. ಮನೆಯಲ್ಲೇ ಉಳಿದುಕೊಂಡ್ರು. ಹೊಡೆಸಿಕೊಂಡ ಗಿಲ್ಲಿನಟ ಸೇರಿ ಉಳಿದ ಸ್ಪರ್ಧಿಗಳು ರಿಷಾ ಮಾಡಿರುವ ತಪ್ಪನ್ನ ಕ್ಷಮಿಸುವುದಾಗಿ ಹೇಳಿದ್ದರು. ಹೀಗಾಗಿ ಆ ವಾರ ರಿಷಾ ಸೇವ್ ಆಗಿದ್ದರು. ಆದರೆ ಮುಂದಿನ ವಾರವೇ ಎಲಿಮನೇಟ್ ಆಗಿ ಹೊರ ಬಂದಿದ್ದಾರೆ.
ಗಿಲ್ಲಿ ಬಗ್ಗೆ ರಿಷಾಗೆ ಉತ್ತಮ ಅಭಿಪ್ರಾಯ ಇರೋದಾಗಿ ಹೇಳಿಕೊಂಡಿದ್ದಾರೆ. ಗಿಲ್ಲಿಗೆ ಸಲುಗೆಯಿಂದ ಜಸ್ಟ್ ಮುಟ್ಟಿದ್ದಕ್ಕೆ ನಾನು ಹಲ್ಲೆ ಮಾಡಿಲ್ಲ, ಅಥವಾ ಹೊಡೆದಿಲ್ಲ. ಅದು ಗಂಭೀರ ವಿಚಾರವೇ ಆಗಿರಲಿಲ್ಲ. ಗಿಲ್ಲಿ ಆಗಿರೋದ್ರಿಂದ ಆ ಕ್ಷಣ ನಗುತ್ತಲೇ ಹಾಗೆ ಕೈ ಮುಟ್ಟಿದೆ ಹೊರತು ನಾನು ಹೊಡೆದಿಲ್ಲ ಎಂದು ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಹಲ್ಲೆ ವಿಚಾರ ಸಂಬಂಧ ಉತ್ತರ ಕೊಟ್ಟಿದ್ದಾರೆ.
ಅಂದಹಾಗೆ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದಕ್ಕೆ ಗಿಲ್ಲಿ ಅಭಿಮಾನಿಗಳೂ ಬೇಸರದಿಂದ ದೂರು ಕೊಡಲು ಮುಂದಾಗಿದ್ದರು. ಆದರೆ ಅಧಿಕೃತ ದೂರು ದಾಖಲಾಗಿಲ್ಲ. ಆದರೆ ಗಿಲ್ಲಿ ಫ್ಯಾನ್ಸ್ ರಿಷಾಗೆ ಎಚ್ಚರಿಕೆ ಕೊಟ್ಟಿದ್ದರು. ಮನೆಯಿಂದ ಹೊರ ಬಂದ ಬಳಿಕ ರಿಷಾ ಈ ಘಟನೆ ಇಷ್ಟು ಗಂಭೀರವಾಗಿದ್ದಕ್ಕೆ ಆಶ್ಚರ್ಯ ಪಟ್ಟಿದ್ದಾರಂತೆ. ಹೀಗಾಗಿ ರಿಷಾ ತಾವು `ಗಿಲ್ಲಿ ಮೇಲೆ ಹಲ್ಲೆ ಮಾಡೇ ಇಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾರೆ.

