ಮೈಸೂರು: ಕುರುಬರಿಗೆ ಮಾತ್ರ ಟಿಕೆಟ್ ಕೊಡುವುದಕ್ಕೆ ಕುರುಬ ಸಮಾಜದವರು ಮಾತ್ರ ಮತ ಹಾಕುತ್ತಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಚಾಮುಂಡಿ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಟಿಕೆಟ್ ಕೇಳುತ್ತಾರೆ. ಹಾಗಂತ ಕೇಳಿದವರಿಗೆಲ್ಲಾ ಟಿಕೆಟ್ ನೀಡುವುದಕ್ಕೆ ಆಗುತ್ತಾ? ಕುರುಬರಿಗೆ ಮಾತ್ರ ಟಿಕೆಟ್ ಕೊಡುವುದಕ್ಕೆ ಕುರುಬ ಸಮಾಜದವರು ಮಾತ್ರ ಮತ ಹಾಕುತ್ತಾರಾ ಎಂದು ಸಿಎಂ ಪ್ರಶ್ನೆ ಮಾಡಿ ಮಾತಾಡಿದ್ದಾರೆ.
Advertisement
ಕುರುಬರು ಮಾತ್ರ ಅಲ್ಲ ಎಲ್ಲಾ ವರ್ಗದವರು ಮತ ಹಾಕುತ್ತಾರೆ. ಎಲ್ಲವನ್ನು ಗಣನೆಗೆ ತೆಗೆದುಕೊಂಡು ಟಿಕೆಟ್ ನೀಡುತ್ತೇವೆ. ಯಾರಿಗೆ ಟಿಕೆಟ್ ಕೊಡಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರೋ ವಿಚಾರವಾಗಿ ಮಾತನಾಡಿದ ಸಿಎಂ, ಊಹಾಪೋಹಗಳಿಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಅಂದ್ರು.
Advertisement
ವರುಣಾ ಕ್ಷೇತ್ರದಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವಿಚಾರದ ಬಗ್ಗೆನೂ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು. ಕೆಎಫ್‍ಡಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಸಚಿವ ಯು.ಟಿ ಖಾದರ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆದ್ರು. ಅದನ್ನು ಯು.ಟಿ.ಖಾದರ್‍ಗೆ ಕೇಳಿ ಎಂದು ಕೋಪಗೊಂಡ್ರು.