ಬೆಂಗಳೂರು: ಬಿಜೆಪಿ (BJP) ರೀತಿ ನಾನು ಒಂದೊಂದು ಸಮಾಜಕ್ಕೆ (Community) ಒಂದೊಂದು ಸಮಾವೇಶ ಮಾಡೋದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಕಿಡಿ ಕಾರಿದ್ದಾರೆ.
ನಗರದ ಜೆಪಿ ಭವನದಲ್ಲಿ ಬಿಜೆಪಿ (BJO) ಒಬಿಸಿ (OBC) ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡೋದಿಲ್ಲ. ನಾಡಿನ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್
ನಾಡಿನ ಅಭಿವೃದ್ಧಿ ದೃಷ್ಟಿಯಿಂದ ಪಂಚರತ್ನ ಯೋಜನೆ ಇದೆ. ಈ ಯೋಜನೆ ಎಲ್ಲ ಸಮುದಾಯಕ್ಕೂ ಇದೆ. ಬಿಜೆಪಿ ಅವರು ಜಾತಿ ಸಮಾವೇಶ ಮಾಡಿ ಏನ್ ಸಾಧನೆ ಮಾಡ್ತಾರೆ. ಜನ ಸೇರಿಸೋದು ಒಂದು ಕೆಲಸನಾ? ಆ ಸಮಾಜಕ್ಕೆ ಏನ್ ಕೊಟ್ಟಿದ್ದಾರೆ ಅಂತಾ ಬಿಜೆಪಿಯವರೇ ಹೇಳಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 8 ಗಂಡಂದಿರಿಂದ 11 ಮಕ್ಕಳು, ಇನ್ನೂ 19 ಮಕ್ಕಳಿaಗಾಗಿ ಪ್ಲ್ಯಾನಿಂಗ್ ಮಾಡಿದ್ದಾಳೆ ಈ ಮಹಿಳೆ
ಇವತ್ತು ಉತ್ತರ ಕರ್ನಾಟಕ ಲಿಂಗಾಯತ ಮುಖಂಡರ ಸಭೆ ಇದೆ. ನಾಡಗೌಡರ ನೇತೃತ್ವದಲ್ಲಿ ಸಭೆ ಮಾಡ್ತಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಯಲ್ಲಿ (Elections) ಜೆಡಿಎಸ್ (JDS) ಅಭ್ಯರ್ಥಿ ಗೆಲ್ಲಸಲು, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡ್ತೀವಿ. ಚುನಾವಣೆ ಹಿನ್ನಲೆಯಲ್ಲಿ ಸಭೆ ಮಾಡ್ತಿದ್ದೇವೆ. ಚುನಾವಣೆ ಬಗ್ಗೆ ಎಲ್ಲರ ಸಲಹೆ ಪಡೆಯುತ್ತೇನೆ. ಅ ಭಾಗಕ್ಕೆ ಹೆಚ್ಚು ಟಿಕೆಟ್ ಕೊಡುವ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.