ಕ್ಯಾಂಡಿ: ಕಳೆದ ವರ್ಷ ಟಿ20 ವಿಶ್ವಕಪ್ (WorldCup) ಟೂರ್ನಿಯಲ್ಲಿ ಪಾಕ್ ತಂಡದ ಗೆಲುವಿಗೆ ಅಡ್ಡಗೋಡೆಯಾಗಿದ್ದ ವಿರಾಟ್ ಕೊಹ್ಲಿ (Virat Kohli) ಅವರನ್ನ ಕಟ್ಟಿಹಾಕಲು ಪಾಕ್ ತಂಡದ ನಾಯಕ ಬಾಬರ್ ಆಜಂ (Babar Azam) ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
????????The King himself, Kohli ???? defied the odds and smashed back-to-back sixes against Haris Rauf????
Kohlis greatest performance !!
India ???????? Vs Pakistan ???????? (ICC Men’s T20 World Cup 2022) #ViratKohli #ViratKohli???? #AsiaCup2023 #AsiaCup #INDvsPAK #PakVsInd #ICCWorldCup2023#PAKvNEP pic.twitter.com/frJmwIqGkK
— Jiten Patel (@JitenHQ) August 30, 2023
Advertisement
2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಆಟವಾಡಿದ್ದ ಕೊಹ್ಲಿ ಪಾಕ್ ವಿರುದ್ಧ 53 ಎಸೆತಗಳಲ್ಲಿ 82 ರನ್ ಚಚ್ಚಿದ್ದರು. ಕೊನೆಯ 8 ಎಸೆತಗಳಲ್ಲಿ 28 ರನ್‌ಗಳು ಬೇಕಿದ್ದಾಗ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸುವ ಮೂಲಕ ಟೀಂ ಇಂಡಿಯಾಕ್ಕೆ (Team India) ಗೆಲುವು ತಂದುಕೊಟ್ಟಿದ್ದರು. ಈ ವಿರೋಚಿತ ಸೋಲು ಮತ್ತೆ ಎದುರಾಗದಂತೆ ನೋಡಿಕೊಳ್ಳಲು ಬಾಬರ್ ಆಜಂ ಕೊಹ್ಲಿಯನ್ನ ಕಟ್ಟಿಹಾಕಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಈ ನಡುವೆ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಆಟಗಾರನಾಗಿರುವ ಬಾಬರ್ ಆಜಂ ಹಾಗೂ ಹಲವು ದಿಗ್ಗಜರ ದಾಖಲೆಗಳನ್ನ ಉಡೀಸ್ ಮಾಡಿರುವ ಕೊಹ್ಲಿ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಟ್ರೆಂಡ್ ಸಹ ಹುಟ್ಟಿಕೊಂಡಿದೆ. ಏಕೆಂದರೆ ಬಾಬರ್ ಹಾಗೂ ಕೊಹ್ಲಿ ಎಲ್ಲಾ ಸ್ವರೂಪದಲ್ಲಿ ಉತ್ತಮ ದಾಖಲೆಗಳನ್ನ ಮಾಡಿದ್ದಾರೆ. ಕೇವಲ ಏಕದಿನ ಕ್ರಿಕೆಟ್ ಅನ್ನು ನೋಡಿದಾಗ ವಿರಾಟ್ ಕೊಹ್ಲಿ 275 ಪಂದ್ಯಗಳಿಂದ 57.32ರ ಸರಾಸರಿಯ ಹಾಗೂ 93.62ರ ಸ್ಟ್ರೈಕ್‌ರೇಟ್‌ನಲ್ಲಿ 12,898 ರನ್‌ಗಳನ್ನ ಗಳಿಸಿದ್ದಾರೆ. ಇದರಲ್ಲಿ ಅವರು 46 ಶತಕಗಳು ಹಾಗೂ 65 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಇದನ್ನೂ ಓದಿ: AsiaCup 2023: ಬಾಂಗ್ಲಾಕ್ಕೆ ಲಗಾಮು ಹಾಕಿದ ಲಂಕಾ – 5 ವಿಕೆಟ್‌ಗಳ ಜಯದೊಂದಿಗೆ ಶುಭಾರಂಭ
Advertisement
ಇನ್ನೂ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ 104 ಏಕದಿನ ಪಂದ್ಯಗಳಿಂದ 59.47ರ ಸರಾಸರಿ ಹಾಗೂ 89.39ರ ಸ್ಟ್ರೈಕ್ ರೇಟ್‌ನಲ್ಲಿ 5,353 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 18 ಶತಕಗಳು ಹಾಗೂ 28 ಅರ್ಧಶತಕಗಳನ್ನ ಬಾರಿಸಿದ್ದಾರೆ. ಶನಿವಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್ ಪಂದ್ಯದಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ. ಇದನ್ನೂ ಓದಿ: AsiaCup 2023: ಟೀಂ ಇಂಡಿಯಾ ವಿರುದ್ಧ ಹೊಸ ದಾಖಲೆ ಬರೆಯಲು ಕಾಯ್ತಿದ್ದಾರೆ ಬಾಬರ್ ಆಜಂ
ಪಾಕ್ ವಿರುದ್ಧ ಕೊಹ್ಲಿಯ ದಾಖಲೆ:
ಪಾಕ್ ವಿರುದ್ಧ ನಡೆದಿರುವ ಏಕದಿನ ಕ್ರಿಕೆಟ್ ಮ್ಯಾಚ್‌ನಲ್ಲಿ ವಿರಾಟ್ ಉತ್ತಮ ಪ್ರದರ್ಶನವನ್ನೇ ತೋರುತ್ತಾ ಬಂದಿದ್ದಾರೆ. ಪ್ರಸಕ್ತ ಏಷ್ಯಾ ಕಪ್ ಟೂರ್ನಿಗೂ ಮುನ್ನ ವಿರಾಟ್ 13 ಏಕದಿನ ಪಂದ್ಯಗಳಿಂದ 48.72ರ ಸರಾಸರಿಯಲ್ಲಿ 2 ಶತಕಗಳು ಸೇರಿದಂತೆ 536 ರನ್ ಗಳಿಸಿದ್ದಾರೆ. ಅಲ್ಲದೇ ಏಕದಿನ ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್ ಸಹ ಆಗಿದ್ದಾರೆ. 2012ರಲ್ಲಿ ಮೀರ್‌ಪುರ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 148 ಎಸೆತಗಳಲ್ಲಿ 183 ರನ್‌ಗಳನ್ನ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಗರಿಷ್ಠ ಸ್ಕೋರ್ ಕೂಡ ಆಗಿದೆ.
2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ವಿರಾಟ್ ಕೊಹ್ಲಿ ತಮ್ಮ 2ನೇ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ 126 ಎಸೆತಗಳನ್ನ ಎದುರಿಸಿದ್ದ ಅವರು, 107 ರನ್‌ಗಳನ್ನು ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 76 ರನ್‌ಗಳಿಂದ ಗೆಲುವು ಪಡೆದಿತ್ತು. ಇನ್ನು ಚಾಂಪಿಯನ್ಸ್ ಟ್ರೋಫಿಯ ಪಾಕ್ ವಿರುದ್ಧ ಕೊಹ್ಲಿ 68 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿದ್ದರು. ಇನ್ನೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 65 ಎಸೆತಗಳಿಂದ 77 ರನ್‌ಗಳನ್ನು ಗಳಿಸಿದ್ದರು.
ಭಾರತ ವಿರುದ್ಧ ಬಾಬರ್ ದಾಖಲೆಗಳು:
ಪಾಕಿಸ್ತಾನ ನಾಯಕ ಬಾಬರ್ ಆಜಂ ಟೀಂ ಇಂಡಿಯಾ ವಿರುದ್ಧ 5 ಏಕದಿನ ಪಂದ್ಯಗಳಿಂದ 31.60ರ ಸರಾಸರಿಯಲ್ಲಿ 158 ರನ್ ಗಳಿಸಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಗುಂಪು ಹಂತದ ಪಂದ್ಯದಲ್ಲಿ ಭಾರತ ವಿರುದ್ಧ ಬಾಬರ್ ಆಜಂ ಮೊದಲ ಬಾರಿ ಆಡಿದ್ದರು. ಈ ಪಂದ್ಯದಲ್ಲಿ ಅವರು ಕೇವಲ 8 ರನ್ ಗಳಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ದರು. ಇದೇ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಜಂ ಅವರು 52 ಎಸೆತಗಳಲ್ಲಿ 46 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 180 ರನ್‌ಗಳಿಂದ ಪಾಕಿಸ್ತಾನ ತಂಡವನ್ನ ಮಣಿಸಿತ್ತು.
ಇನ್ನು 2018ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಬಾಬರ್ ಆಜಂ ಕ್ರಮವಾಗಿ 47 ಹಾಗೂ 9 ರನ್ ಗಳಿಸಿದ್ದರು. ಇನ್ನು 2019ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಬರ್ ಆಜಂ 57 ಎಸೆತಗಳಲ್ಲಿ 48 ರನ್ ಗಳಿಸಿದ್ದರು. ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಬಾಬರ್ ಆಜಂ ಅವರ ಗರಿಷ್ಠ ಮೊತ್ತ ಇದಾಗಿದೆ.
Web Stories