ಬೆಂಗಳೂರು: ರಾಜ್ಯದಲ್ಲಿ ಎಪಿಎಲ್-ಬಿಪಿಎಲ್ ಪಡಿತರ ಕಾರ್ಡ್ (APL – BPL Ration Card) ವಿವಾದ ಜೋರಾಗ್ತಿದೆ. ರಾತ್ರೋ ರಾತ್ರಿ ಸಾವಿರಾರು ರೇಷನ್ ಕಾರ್ಡ್‌ಗಳನ್ನ ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾವಣೆ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ.
ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್ ಗಳಿಗೆ ಯಾವುದೇ ತೊಂದರೆ ಇಲ್ಲ.
ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆಯೇ? ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಅನರ್ಹರ ಕಾರ್ಡ್ ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ… pic.twitter.com/B5U6p5OP3x
— Siddaramaiah (@siddaramaiah) November 17, 2024
Advertisement
ಕೆಲವರಂತೂ ರೇಷನ್ ತೆಗೆದುಕೊಳ್ಳಲು ನ್ಯಾಯ ಬೆಲೆ ಅಂಗಡಿಗೆ ಹೋದಾಗ ತಮ್ಮ ಕಾರ್ಡ್‌ಗಳು ಬದಲಾಗಿರೋದು ಬೆಳಕಿಗೆ ಬಂದಿದೆ. ಇದರಿಂದಾಗಿ, ರಾಜ್ಯದ ರೇಷನ್ ಕಾರ್ಡ್‌ದಾರರಲ್ಲಿ ಆತಂಕ ಹೆಚ್ಚಾಗಿದೆ. ಇದರ ನಡುವೆ ಕಾರ್ಡ್‌ಗಳನ್ನು ರದ್ದು ಮಾಡಲಾಗ್ತಿದೆ ಅಂತ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು – ಕಲಬುರಗಿಯಲ್ಲಿ ಹೆಚ್ಚು, ಉಡುಪಿಯಲ್ಲಿ ಅತಿ ಕಡಿಮೆ
Advertisement
Advertisement
ಕೇಂದ್ರ ಸರ್ಕಾರ (Central Government) 5 ಕೆಜಿ ಧಾನ್ಯ ಕೊಡ್ತಿದ್ದರೂ ರಾಜ್ಯ ಸರ್ಕಾರ ಕಾರ್ಡ್ ಕಡಿತ ಮಾಡ್ತಿದೆ. ರಾಜ್ಯ ಸರ್ಕಾರ ದಿವಾಳಿ ಆಗ್ತಿದೆ ಅಂತ ಕೇಂದ್ರ ಸಚಿವ ಜೋಶಿ ಟೀಕಿಸಿದ್ದಾರೆ. ಕುಮಾರಸ್ವಾಮಿ (HD Kumaraswamy) ಮಾತಾಡಿ, ಗ್ಯಾರಂಟಿ ಸ್ಕೀಮ್‌ನಿಂದ ಸರ್ಕಾರಕ್ಕೆ ಏನೂ ಹೊರೆ ಇಲ್ಲ. ತೆರಿಗೆ ಹೆಚ್ಚಿಗೆ ಮಾಡಿ ಸಂಗ್ರಹ ಮಾಡಿರುವ ಹಣ ಏನಾಯ್ತು..? ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಾಲನಟ ರೋಹಿತ್ ಆರೋಗ್ಯ ಸ್ಥಿರ – ದವಡೆಗೆ ಶಸ್ತ್ರಚಿಕಿತ್ಸೆ, ಪ್ಲೇಟ್ ಅಳವಡಿಕೆ
Advertisement
ವಿಪಕ್ಷ ನಾಯಕ ಅಶೋಕ್ ಕೂಡ, ಕಾರ್ಡ್ ರದ್ದು ಮಾಡ್ತಿರೋ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಅಂತ ವ್ಯಂಗ್ಯವಾಡಿದ್ದಾರೆ. ಬಿಜೆಪಿಗರ ಈ ಟೀಕೆ-ಟಿಪ್ಪಣಿ, ವಾಗ್ದಾಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ಕೊಟ್ಟಿದ್ದಾರೆ. ಎಪಿಎಲ್ ರದ್ದು ಮಾಡಿಲ್ಲ. ಅನರ್ಹರನ್ನು ತೆಗೆದು ಹಾಕ್ತೇವೆ. ಟ್ಯಾಕ್ಸ್ ಕಟ್ಟೋವ್ರು, ಸರ್ಕಾರಿ ನೌಕರರಿಗೆ ಬಿಪಿಎಲ್ ಇದ್ದರೆ ಎಪಿಎಲ್ ಮಾಡ್ತೇವೆ. ಗೃಹಲಕ್ಷ್ಮಿ ಯೋಜನೆಗೆ ಬೇರೆಯದ್ದೇ ಮಾನದಂಡಗಳಿವೆ ಅಂತ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಸಾಹಿತ್ಯ ಸಮ್ಮೇಳನಕ್ಕೂ ಮುನ್ನವೇ ವಿವಾದ; ಟಿಪ್ಪು ಕುರಿತ ವಿಚಾರ ಸಂಕಿರಣಕ್ಕೆ ಪ್ರಗತಿಪರ ಒತ್ತಾಯ
ಅಧಿಕಾರಿಗಳ ಯಡವಟ್ಟು:
ಎಪಿಎಲ್-ಬಿಪಿಎಲ್ ಕಾರ್ಡ್ ಪರಿಷ್ಕರಣೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಎಡವಟ್ಟು ಮಾಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಜೈಮಾರುತಿ ನಗರದ ಬಡ ಕುಟುಂಬದ ಬಿಪಿಎಲ್ ಕಾರ್ಡನ್ನು ಎಪಿಎಲ್‌ಗೆ ಬದಲಾಯಿಸಿದ್ದಾರೆ. ಇವರು ಐಟಿ ಪಾವತಿದಾರರು ಅಂತ ಆಹಾರ ನಿರೀಕ್ಷಕರು ನಮೂದಿಸಿದ್ದಾರೆ. ಆದರೆ, ರೇಷನ್ ತೆಗೆದುಕೊಳ್ಳಲು ಹೋದಾಗ ತಮ್ಮ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿರೋದು ಬೆಳಕಿಗೆ ಬಂದಿದೆ. 2 ತಿಂಗಳಿಂದ ಅಕ್ಕಿಯಿಲ್ಲದೆ ಈ ಬಡಕುಟುಂಬ ಪರದಾಡ್ತಿದೆ.
ಜೊತೆಗೆ, ಆರೋಗ್ಯ ಸೇವೆ, ಭಾಗ್ಯಲಕ್ಷ್ಮಿ ಬಾಂಡ್ ಸೇವೆ ಕೂಡ ಸಿಗ್ತಿಲ್ಲ. ಈ ಮಧ್ಯೆ, ಹಾಸನ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ 2,925 ಬಿಪಿಎಲ್ ರೇಷನ್ ಕಾರ್ಡ್‌ಗಳನ್ನ ಎಪಿಎಲ್ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ತಿಳಿದುಬಂದಿದೆ.