ಅಮರಾವತಿ: ಕೆಲವೊಂದು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ (Operation) ಮಾಡುವಾಗ ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಘಟನೆಯೊಂದು ಆಂಧ್ರಪ್ರದೇಶ (Andrapradesh) ದ ಎನ್‍ಟಿಆರ್ ಜಿಲ್ಲೆಯಲ್ಲಿ ನಡೆದಿದೆ.
ಹೌದು. 51 ವರ್ಷದ ಮಹಿಳೆಗೆ 8 ತಿಂಗಳ ಹಿಂದೆ ಹಿಸ್ಟರೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ವೈದ್ಯರು ಮೀಟರ್ ಉದ್ದದ ಬಟ್ಟೆಯನ್ನು ಹೊಟ್ಟೆಯಲ್ಲಿಯೇ ಬಿಟ್ಟು ಎಡವಟ್ಟು ಮಾಡಿದ್ದಾರೆ. ಇದನ್ನೂ ಓದಿ: ಬೆಡ್‌ರೂಮ್‌ನಲ್ಲಿ ಮಲಗಿದ ಸ್ಥಿತಿಯಲ್ಲಿ ಯೂಟ್ಯೂಬರ್ ಮೃತದೇಹ ಪತ್ತೆ
Advertisement
Advertisement
ವರದಿಗಳ ಪ್ರಕಾರ, ಆಸ್ಪತ್ರೆಯ ವೈದ್ಯೆ ಅನು ಎಂಬಾಕೆ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಹೊಟ್ಟೆಯಲ್ಲಿಯೇ ಬಟ್ಟೆಯನ್ನು ಬಿಟ್ಟು ಹೊಲಿಗೆ ಹಾಕಿದ್ದಾರೆ. ಇದಾದ ಕೆಲವು ವಾರಗಳ ನಂತರ, ಮಹಿಳೆಗೆ ತನ್ನ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಹಲವು ಬಾರಿ ಸಿಟಿ ಸ್ಕ್ಯಾನ್ ಮಾಡಿಸಿದರೂ ಪ್ರಯೋಜನವಾಗಲಿಲ್ಲ.
Advertisement
ಕೊನೆಗೆ ಅವರು ವಿಜಯವಾಡದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ವಿವರಿಸಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿದಾಗ ಮಹಿಳೆಯ ಹೊಟ್ಟೆ (Stomach) ಯೊಳಗಡೆ ಬಟ್ಟೆಯ ತುಂಡು ಇರುವುದು ಬಯಲಾಗಿದೆ. ಕೂಡಲೇ ಆಪರೇಷನ್ ಮಾಡುವಂತೆ ಸೂಚನೆ ನೀಡಿದ್ದಾರೆ.
Advertisement
ಅಂತೆಯೇ ಮಹಿಳೆಗೆ ಆಪರೇಷನ್ ಮಾಡಿ ಮೀಟರ್ ಉದ್ದದ ಬಟ್ಟೆ (Cloth) ಯನ್ನು ಹೊರತೆಗೆದ ವೈದ್ಯರೇ ಒಂದು ಬಾರಿ ಶಾಕ್ ಗೆ ಒಳಗಾಗಿದ್ದಾರೆ. ಇತ್ತ ಕುಟುಂಬಸ್ಥರು ಕೂಡ ಮೊದಲು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ನಿರ್ಲಕ್ಷ್ಯಕ್ಕೆ ಬೆರಗಾಗಿದ್ದಾರೆ. ಅಲ್ಲದೆ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k