ಬೆಂಗಳೂರು: ರಾಜ್ಯ ರಾಜಧಾನಿಯ ಕೂಗಳತೆ ದೂರದ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.
ಅಂಬುಲೆನ್ಸ್ ಇದ್ದರೂ ಬಾಣಂತಿ ಹಾಗೂ ಮಗುವನ್ನು ಟಾಟಾ ಏಸ್ ವಾಹನದಲ್ಲಿ ರವಾನಿಸಿದ್ದಾರೆ. ಮಾನವೀಯತೆ ಕಳೆದುಕೊಂಡ ಆಸ್ಪತ್ರೆ ವೈದ್ಯರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದ ಮಹಿಳೆ ಎರಡು ದಿನದ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಬಾಣಂತಿ ಮತ್ತು ಮಗುವನ್ನು ಟಾಟಾಏಸ್ ವಾಹನದಲ್ಲಿ ರವಾನೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಸೇವೆ ಇದ್ದರೂ ವೈದ್ಯರು ಬಾಣಂತಿಗೆ ಸೇವೆ ಒದಗಿಸಿಲ್ಲ. ಸರ್ಕಾರದಿಂದ ಉಚಿತ ಸೇವೆಗೆ ಇರುವ ನಗು-ಮಗು ಅಂಬುಲೆನ್ಸ್ ನಲ್ಲಿ ಮಗು ಮತ್ತು ಬಾಣಂತಿಯನ್ನು ಕಳುಹಿಸಬೇಕಾದದ್ದು ವೈದ್ಯರ ಕರ್ತವ್ಯವಾಗಿತ್ತು. ಆದರೆ ಈ ಅಂಬುಲೆನ್ಸ್ ನಿಂತಲ್ಲೇ ನಿಂತಿದ್ದು, ಮಳೆ-ಚಳಿಯಲ್ಲಿ ಮಗು ಮತ್ತು ಬಾಣಂತಿ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಗ್ರಾಮದತ್ತ ತೆರಳಿದ್ದಾರೆ.