– ಮಂಗ್ಳೂರಲ್ಲಿ ಅಮಾನವೀಯ ಘಟನೆ
ಮಂಗಳೂರು: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರನನ್ನು ವೈದ್ಯರು ಉಪಚರಿಸದೆ ಮೃತಪಟ್ಟ ಬಳಿಕ ಆತನ ಮೃತದೇಹವನ್ನು ಗೋಡಾನ್‍ನಲ್ಲಿ ಮಲಗಿಸಿದ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಪುತ್ತೂರಿನ ದರ್ಬೆಯಲ್ಲಿ ಬೈಕ್ ಸವಾರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆ ತಲುಪುವ ವೇಳೆಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆದರೆ ವೈದ್ಯರು ತುರ್ತು ಚಿಕಿತ್ಸೆಯನ್ನೂ ನೀಡದೆ ರೋಗಿಯನ್ನೂ ಗಮನಿಸದೆ ಬದುಕಿದ್ದಾನಾ ಸತ್ತಿದ್ದಾನಾ ಅಂತಾ ಸಾರ್ವಜನಿಕರ ಬಳಿಯೇ ಉಡಾಫೆಯ ಪ್ರಶ್ನೆ ಎತ್ತಿದ್ದಾರೆ.
Advertisement
ಸುಮಾರು ಒಂದು ಗಂಟೆಗಳ ಕಾಲ ಆಸ್ಪತ್ರೆಯ ಕಾರಿಡಾರ್ ನಲ್ಲೇ ಸ್ಟ್ರೇಚ್ಚರ್ ಮೇಲೆ ಇರಿಸಿದ್ದು, ನಂತರ ಆಸ್ಪತ್ರೆಯ ಡಿಸೇಲ್ ಸ್ಟಾಕ್ ಇಡುವ ಸ್ಟೇರ್ ಗ್ರಾಡ್ ಕೆಳಗೆ ಮೃತದೇಹ ಇರಿಸಿದ್ದಾರೆ. ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ತಂದ ಸಾರ್ವಜನಿಕರ ಮೇಲೆಯೇ ಡ್ಯೂಟಿ ಡಾಕ್ಟರ್ ರೇಗಾಡಿದ್ದು, ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ದಬಾಯಿಸಿದ್ದಾರೆ.
Advertisement
ತುರ್ತು ಚಿಕಿತ್ಸೆಯನ್ನೂ ನೀಡದೆ ಸಾರ್ವಜನಿಕರನ್ನೇ ದಬಾಯಿಸಿ ಕೊನೆಗೆ ಸ್ಟೇರ್ ಕೇಸ್ ನಲ್ಲಿ ಮೃತದೇಹ ಇರಿಸಿದ ಆಸ್ಪತ್ರೆ ಸಿಬ್ಬಂದಿ ವರ್ತನೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv