ಭೋಪಾಲ್: ಆಸ್ಪತ್ರೆಯಲ್ಲಿ ರೋಗಿಗಳ ಮುಂದೆಯೇ ವೈದ್ಯರು ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿದ ಘಟನೆ ಮಧ್ಯ ಪ್ರದೇಶದ ಔಷಂಗಾಬಾದ್‍ನಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಸೈಲಂಟ್ ಆಗಿ ಇರಬೇಕು ಎಂದು ಹೇಳಿದ್ದರೂ ರೋಗಿಗಳ ಮುಂದೆಯೇ ಜಿಲ್ಲಾಸ್ಪತ್ರೆಯ ವೈದ್ಯರು ಕುಣಿದು ಕುಪ್ಪಳಿಸುವುದನ್ನು ಕಂಡು ರೋಗಿಗಳು ಬೇಸತ್ತು ಹೋಗಿದ್ದಾರೆ. ಡಿಜೆ ಶಬ್ಧ ಅತಿಯಾಗಿ ಜೋರಾಗಿದ್ದರಿಂದ ರೋಗಿಯೊಬ್ಬರು ವೈದ್ಯರ ಬಳಿ ಹೋಗಿ ದೂರು ನೀಡಿದ್ದರು. ಆದರೆ ವೈದ್ಯ ರೋಗಿಯನ್ನೇ ಬೈದು ವಾಪಸ್ ಕಳುಹಿಸಿದ್ದಾನೆ.
Advertisement
Advertisement
ಇಷ್ಟೆಲ್ಲ ನಡೆದರೂ ವೈದರು ಯಾರ ಮಾತನ್ನೂ ಕೆಳದೇ, ರೋಗಿಗಳ ಬಗ್ಗೆ ಯೋಚನೆ ಮಾಡದೆ ಜೋರಾಗಿ ಹಾಡು ಹಾಕಿ, ಮತ್ತಷ್ಟು ಕುಣಿಯಲು ಆರಂಭಿಸಿದ್ದರು. ಈ ಬಗ್ಗೆ ಔಷಂಗಾಬಾದ್‍ನ ಸಿಎಮ್‍ಎಚ್‍ಒ ಅವರನ್ನು ಕೇಳಿದ್ದಾಗ ಇದರ ಬಗ್ಗೆ ಸರಿಯಾಗಿ ಪ್ರತಿಕ್ರಿಯೇ ನೀಡಿಲ್ಲ.
Advertisement
Advertisement
ಈ ಹಿಂದೆ ವೈದ್ಯರು, ಸಿಬ್ಬಂದಿ ಕೆಲಸ ಬಿಟ್ಟು ದುಡ್ಡಿಗಾಗಿ ಎಕ್ಕಾ ರಾಜಾ ರಾಣಿ ಆಟ ಆಡಿರುವ ಘಟನೆ ಕರ್ನಾಟಕದ ವಿಜಯಪುರದಲ್ಲಿ ನಡೆದಿತ್ತು.
ಆಸ್ಪತ್ರೆಯ ಕಂಪೌಂಡರ್ ರಾಜೀವ್ ಬಳ್ಳಾರಿ ಹಾಗೂ ಅಂಬುಲೆನ್ಸ್ ಡ್ರೈವರ್ ಪಾಂಡು ನೇತೃತ್ವದಲ್ಲಿ ಕೆಲಸ ಮಾಡದೇ ಇಸ್ಪೀಟ್ ಆಟದಲ್ಲಿ ಮಗ್ನನಾಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ರಾಜೀವ್ ಬಳ್ಳಾರಿ ಜೊತೆಗೆ ಅಂಬುಲೆನ್ಸ್ ಡ್ರೈವರ್ ಪಾಂಡು ಸೇರಿದಂತೆ ನಿವೃತ್ತರಾದ ಡಾಕ್ಟರ್‍ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗಿಯಾಗಿದ್ದರು. ಪ್ರತಿನಿತ್ಯ ಏನಿಲ್ಲ ಎಂದರೂ ಸಾವಿರಾರು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ವಿಜಯಪುರ ಸೇರಿದಂತೆ ಸೊಲ್ಲಾಪುರ ಹಾಗೂ ಮಹಾರಾಷ್ಟ್ರದಿಂದ ಕೂಡ ರೋಗಿಗಳು ವಿಜಯಪುರ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಇಷ್ಟೆಲ್ಲ ರೋಗಿಗಳ ಪಾಲಿಗೆ ದೇವರು ಆಗೋ ಬದಲು ಕ್ಷಣಿಕ ವೇಳೆಯಲ್ಲಿ ಹಣಗಳಿಸುವ ಸಲುವಾಗಿ ಸರ್ಕಾರಿ ಆಸ್ಪತ್ರೆಯನ್ನೇ ಇಸ್ಪೀಟು ಅಡ್ಡಾವನ್ನಾಗಿ ಮಾಡಿಕೊಂಡಿದ್ದರು.
https://www.youtube.com/watch?v=pi9cRo4oSqY