– ದೂರು ದಾಖಲಾಗುತ್ತಿದಂತೆ ವೈದ್ಯರು ಎಸ್ಕೇಪ್
ಮಡಿಕೇರಿ: ಜೇಬು ತುಂಬಾ ಸಂಬಳ ಬಂದರೂ, ವೈದ್ಯ ವೃತ್ತಿಗೆ ಕಳಂಕವಾಗುವಂತಹ ಕೆಲಸವನ್ನು ಈ ವೈದ್ಯ ದಂಪತಿ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿ ಮಗುವನ್ನು ಲಕ್ಷ ಲಕ್ಷ ರೂ.ಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದು, ಸಿಕ್ಕಿ ಹಾಕಿಕೊಂಡಿದ್ದಾರೆ.
ನಗರದ ಹೊಸ ಬಡಾವಣೆಯ ನಿವಾಸಿಗಳಾದ ಡಾ.ರಾಜೇಶ್ವರಿ ಹಾಗೂ ಡಾ.ನವೀನ್ ಆರೋಪಿಗಳಾಗಿದ್ದು, ಈ ದಂಪತಿ ಹಲವು ವರ್ಷಗಳಿಂದ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. 2019ರ ಆಗಸ್ಟ್ 22 ರಂದು ಅಪ್ರಾಪ್ತೆಯೊಬ್ಬಳು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ರಾಜೇಶ್ವರಿ ತನ್ನ ಪತಿಯೊಂದಿಗೆ ಸೇರಿಕೊಂಡು ಅಪ್ರಾಪ್ತೆಯನ್ನು ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದ್ದಾರೆ. ನಂತರ ಮಗುವನ್ನು ಅದೇ ಆಸ್ಪತ್ರೆಯಲ್ಲಿ ಗ್ರೂಪ್ ಡಿ. ದರ್ಜೆಯ ನೌಕರಳಾಗಿರುವ ಸೆನೆನಾಳ ಮಗನಾದ ರಾಬಿನ್‍ಗೆ 1.50 ಲಕ್ಷ ರೂ.ಗೆ ಮಾರಿದ್ದಾಳೆ.
Advertisement
Advertisement
ಅಲ್ಲದೆ ಸೆನೆನಾ ಮಗ ರಾಬೀನ್ ಹಾಗೂ ಸೊಸೆ ಸರಳಾ ಮೇರಿಗೆ ಮಗು ಜನಿಸಿದೆ ಎನ್ನುವಂತೆ ನಗರಸಭೆಯಲ್ಲಿ ನಕಲಿ ಜನನ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದಾರೆ. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಭಾನುವಾರ ಮಡಿಕೇರಿಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಮಗುವನ್ನು ಮಾರಾಟ ಮಾಡಿದ್ದ ವೈದ್ಯರಾದ ಡಾ.ರಾಜೇಶ್ವರಿ, ಡಾ.ನವೀನ್ ಹಾಗೂ ಅಶ್ವಿನಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದ ಮೇರಿ, ರಮ್ಯ, ಕವಿತಾ ಹಾಗೂ ಮಗು ತೆಗೆದುಕೊಂಡ ಸೆನೆನಾ ಆಕೆಯ ಮಗ ರಾಬೀನ್, ಸೊಸೆ ಸರಳಾ ಮೇರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
Advertisement
ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಡಿ.27 ರಂದು ಸೆನೆನಾ ಮನೆಗೆ ತೆರಳಿ ಪರಿಶೀಲಿಸಿದ್ದು, 4 ತಿಂಗಳ ಗಂಡು ಮಗು ಪತ್ತೆಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ವೈದ್ಯ ದಂಪತಿ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.