ಲಕ್ನೋ: ಕಂಠಪೂರ್ತಿ ಕುಡಿದು ಪರೀಕ್ಷಿಸುತ್ತಿರುವುದನ್ನು ಕಂಡು ರೋಗಿಯ ಕುಟುಂಬಸ್ಥರು ವೈದ್ಯನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದನ್ ಎಂಬುವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಕುಟುಂಬಸ್ಥರು ರೋಗಿಯನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆಸ್ಪತ್ರೆಯ ವೈದ್ಯ ರೋಗಿಯನ್ನು ಪರೀಕ್ಷಿಸುವ ವೇಳೆ ರೋಗಿಯ ಮೇಲೆಯೇ ಬಿದ್ದಿದ್ದಾನೆ. ಇದನ್ನು ಕಂಡ ರೋಗಿಯ ಸಂಬಂಧಿಕರು ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
Advertisement
#WATCH Kasganj: A doctor at Community Health Centre who was allegedly in an inebriated state was beaten up by public yesterday. Relative of a patient says, "My relative was injured in a road accident, the doctor didn't attend him & instead fell on him." pic.twitter.com/vIWjybUY4r
— ANI UP/Uttarakhand (@ANINewsUP) June 28, 2019
Advertisement
ಅಪಘಾತದಿಂದ ತೀವ್ರ ಗೊಂಡಿದ್ದ ಮದನ್‍ನನ್ನು ಆಸ್ಪತ್ರೆಗೆ ಕರೆ ತಂದೆವು. ಆಸ್ಪತ್ರೆಗೆ ಬರುತ್ತಿದ್ದಂತೆ ವೈದ್ಯರು ರೋಗಿಯನ್ನು ದಾಖಲಿಸಲು 10 ಸಾವಿರ ರೂ. ನೀಡುವಂತೆ ಕೇಳಿದರು. ಆದರೂ ರೋಗಿ ತೀವ್ರ ಗಾಯಗೊಂಡಿದ್ದರಿಂದ ಹೇಗೋ ಮಾಡಿ 5 ಸಾವಿರ ರೂ. ನೀಡಿದೆವು. ವೈದ್ಯರು ಉಳಿದ ಹಣವನ್ನೂ ನೀಡುವಂತೆ ಬೇಡಿಕೆ ಇಟ್ಟರು. ಅಲ್ಲದೆ, ಉಳಿದ ಹಣ ನೀಡದಿದ್ದಲ್ಲಿ ಬೇರೆ ಆಸ್ಪತ್ರೆಯನ್ನು ಸೂಚಿಸುವುದಿಲ್ಲ ಎಂದು ಹೆದರಿಸಿದರು ಎಂದು ರೋಗಿ ಮದನ್ ಸಹೋದರ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ನಾನು ದಯಾಮಾಡಿ ಬೇರೆ ಆಸ್ಪತ್ರೆಯನ್ನು ಸೂಚಿಸಿ ಎಂದು ಕೇಳಿದಾಗ ವೈದ್ಯರು ನನಗೆ ಹೊಡೆದರು. ನಂತರ ಜಗಳ ಪ್ರಾರಂಭವಾಯಿತು. ಅಲ್ಲದೆ, ವೈದ್ಯರು ತುಂಬಾ ಕುಡಿದಿದ್ದರು. ನಿಲ್ಲಲು ಸಾಧ್ಯವಾಗದೆ ನನ್ನ ತಮ್ಮನ ಮೇಲೂ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಕುಟುಂಬದ ಇತರ ಸದಸ್ಯರು ಸಹ ಇದೇ ರೀತಿ ಆರೋಪ ಮಾಡಿದ್ದಾರೆ.