ಉಡುಪಿ: ನ್ಯುಮೋನಿಯಾಕ್ಕೆ ಹಲವು ದಿನ ಚಿಕಿತ್ಸೆ ಬೇಕು. ಪೇಜಾವರ ಶ್ರೀಗಳ ಆರೋಗ್ಯ ಸದ್ಯ ಸ್ಥಿರವಾಗಿದೆ. ಸಂಪೂರ್ಣ ಸುಧಾರಿಸಲು ಸಮಯಾವಕಾಶ ಬೇಕಾಗಬಹುದು ಎಂದು ಪೇಜಾವರ ಶ್ರೀ ಶಿಷ್ಯೆ, ಕಾರ್ಪೊರೇಟ್ ಜಗತ್ತಿನ ಪ್ರಭಾವಿ ನೀರಾ ರಾಡಿಯಾ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ನ್ಯುಮೋನಿಯಾಗೆ ಕೆಲ ದಿನ ಟ್ರೀಟ್‍ಮೆಂಟ್ ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ನ್ಯುಮೋನಿಯಾ ಸಮಸ್ಯೆಗೆ ಹೆಚ್ಚು ದಿನ ಟ್ರೀಟ್ಮೆಂಟ್ ಬೇಕಾಗುತ್ತದೆ. ಶ್ರೀಗಳು ದಾಖಲಾದ ಸ್ಥಿತಿಗಿಂತ ಆರೋಗ್ಯ ಈಗ ಬಹಳ ಸುಧಾರಿಸಿದೆ ಎಂದರು. ಇದನ್ನೂ ಓದಿ: ಎದೆಯಲ್ಲಿದ್ದ ಕಫ ನೀರಾಗುತ್ತಿದೆ- ಚಿಕಿತ್ಸೆಗೆ ಪೇಜಾವರ ಶ್ರೀಗಳು ಸ್ಪಂದನೆ
Advertisement
Advertisement
ತನ್ನ ನಿಯತಿ ಹೆಲ್ತ್ ಕೇರ್ ಮಥುರಾ, ಡೆಲ್ಲಿಯ ಆಸ್ಪತ್ರೆಯ ಉತ್ಪಲ್ ಶರ್ಮಾ ಮತ್ತು ಅಜಯ್ ಅಗರವಾಲ್ ಇಬ್ಬರು ತಜ್ಞರು ನನ್ನ ಜೊತೆಗಿದ್ದಾರೆ. ಅವರು ಕೆಎಂಸಿ ವೈದ್ಯರ ತಂಡದ ಜೊತೆ ಚರ್ಚೆ ಮಾಡಿದ್ದಾರೆ ಎಂದು ನೀರಾ ಹೇಳಿದರು.
Advertisement
ಡಾ. ಉತ್ಪಲ್ ಶರ್ಮಾ ಮಾತನಾಡಿ, ಡಾಕ್ಟರ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಒಬ್ಬ ರೋಗಿಯನ್ನು ಮೂರು ದಿನ ಮಾನಿಟರ್ ಮಾಡಬೇಕು. ಗುರುಗಳ ಆರೋಗ್ಯದಲ್ಲಿ ಸುಧಾರಣೆ ಇದೆ. ಕೆಎಂಸಿ ವೈದ್ಯರ ತಂಡ ಬಹಳ ಶ್ರಮ ವಹಿಸುತ್ತಿದೆ ಎಂದರು.