ದೆಹಲಿ: ಇಲ್ಲಿನ (Delhi) ಜೈತ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ (Hospital) ಇಬ್ಬರು ಅಪ್ರಾಪ್ತರು 55 ವರ್ಷದ ವೈದ್ಯನನ್ನು (Doctor) ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಹತ್ಯೆಗೊಳಗಾದ ವೈದ್ಯನನ್ನು ಡಾ.ಜಾವೇದ್ ಅಖ್ತರ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ಇಬ್ಬರು 16-17 ವರ್ಷ ವಯಸ್ಸಿನವರು ತಡರಾತ್ರಿ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ಒಬ್ಬ ತನ್ನ ಗಾಯಗೊಂಡ ಕಾಲ್ಬೆರಳಿಗೆ ಡ್ರೆಸ್ಸಿಂಗ್ ಬದಲಾಯಿಸಲು ಕೇಳಿದ. ಆತನಿಗೆ ಚಿಕಿತ್ಸೆ ನೀಡಿ, ಡ್ರೆಸ್ಸಿಂಗ್ ಮಾಡಲಾಯಿತು. ಬಳಿಕ ತನಗೆ ಪ್ರಿಸ್ಕ್ರಿಪ್ಷನ್ ಬೇಕು ಎಂದು ಕೇಳಿದ. ಈ ವೇಳೆ ಡಾ.ಜಾವೇದ್ ಅಖ್ತರ್ ಅವರ ಕ್ಯಾಬಿನ್‌ಗೆ ಹೋದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಅವರ ತಲೆಗೆ ಗುಂಡು ತಗುಲಿದ್ದು ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್
- Advertisement -
- Advertisement -
ಆರೋಪಿಗಳು 16 ಅಥವಾ 17 ವರ್ಷ ವಯಸ್ಸಿನವರಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಉದ್ದೇಶಿತ ಹತ್ಯೆಯ ಪ್ರಕರಣವೆಂದು ತೋರುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
- Advertisement -
- Advertisement -
ಶಂಕಿತರನ್ನು ಗುರುತಿಸಲು ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: Japan| ಏರ್‌ಪೋರ್ಟ್ ಬಳಿ 2ನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟ – ವಿಮಾನ ಹಾರಾಟ ರದ್ದು