ಚಿಕ್ಕೋಡಿ(ಬೆಳಗಾವಿ): ಸನಾತನ ಧರ್ಮದ ದಿವ್ಯ ಶಕ್ತಿ ಆಯುರ್ವೇದ, ಆಯುರ್ವೇದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಖ್ಯಾತ ಆಯುರ್ವೇದ ವೈದ್ಯ ಸಚ್ಚಿನ ಮಿಶ್ರಕೋಟಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗವನಾಳ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ನಿಮಿತ್ತ ವಿವಿಧ ರೋಗಗಳಿಗೆ ಉಚಿತ ಔಷಧಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾಟಿ ಔಷಧ ಅಥವಾ ಆಯುರ್ವೇದ ಔಷಧಗಳ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
Advertisement
Advertisement
ಮೂರು ತಲೆ ಮಾರಿನಿಂದ ಆಯುರ್ವೇದ ಔಷಧ ಇಂದಿಗೂ ಹೆಸರು ಉಳಿಸಿಕೊಂಡಿದೆ. ಇಲ್ಲಿನ ಗವನಾಳ ಗ್ರಾಮದ ಡಾ.ಸಚೀನ ಮಿಶ್ರಕೋಟಿ ಹಾಗೂ ಇವರ ಸಹೋದರ ಡಾ.ಪ್ರವೀಣ ಮಿಶ್ರಿಕೋಟಿ ವರ್ಷದಲ್ಲಿ ಎರಡು ದಿನ ಉಚಿತ ಔಷಧ ನೀಡುವ ಮೂಲಕ ಈ ಭಾಗದಲ್ಲಿ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ
Advertisement
Advertisement
ಪ್ರತಿ ಭಾರತ ಹುಣ್ಣುಮೆ ಹಾಗೂ ಹೋಳಿ ಹುಣ್ಣಿಮೆಯ ದಿನದಂದು ಡಾ.ಸಚಿನ ಮಿಶ್ರಕೋಟಿ ಕುಟುಂಬಸ್ಥರ ಉಚಿತ ಔಷಧ ನೀಡುತ್ತಾರೆ. ಬಿಎಎಂಎಸ್ ವೈದ್ಯಕೀಯ ಶಿಕ್ಷಣ ಪಡೆದಿರುವ ಇವರು ಹೋಳಿ ಹುಣ್ಣಿಮೆಯ ದಿನದಂದು ನೂರಾರು ಜನರಿಗೆ ಉಚಿತ ಔಷಧ ನೀಡಿದ್ದಾರೆ. ಈ ಔಷಧವು ಗಿಡ ಮೂಲಿಕೆಯಿಂದ ತಯಾರಿಸಿದ್ದು, ಇದು ನಿರಂತರ ಜ್ವರ, ಕೆಮ್ಮು, ನೆಗಡಿ ಕಫ ಸೇರಿದಂತೆ ದಿರ್ಘಕಾಲ ಕಾಡುವ ಭಾದೆಗಳಿಗೆ ಉಪಚಾರ ನೀಡುತ್ತದೆ. ಹಾಗೂ ಇದನ್ನು ನಾವು ಪ್ರತಿ ಹೋಳಿ ಹುಣ್ಣಿಮೆಯ ಹಾಗೂ ಭರತ ಹುಣ್ಣುಮೆ ದಿನದಂದು ಉಚಿತವಾಗಿ ನೀಡುತ್ತೆವೆ ಎಂದರು.
ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಯ ಜನರು ಹಾಗೂ ನೆರೆಯ ಮಹಾರಾಷ್ಟ್ರ ಜನರು ಆಗಮಿಸಿ ಔಷಧ ಪಡೆಯುತ್ತಾರೆ ಎಂದು ಡಾ.ಸಚಿನ ಮಿಶ್ರಕೋಟಿ ತಿಳಿಸಿದರು .ಈ ಸಂದರ್ಭದಲ್ಲಿ ಕುಟುಂಬಸ್ಥರ ಉಪಸ್ಥಿತರಿದ್ದರು. ಇದನ್ನೂ ಓದಿ: ಯುದ್ಧಭೂಮಿಯಿಂದ ಕನ್ನಡಿಗರನ್ನು ಕರೆತಂದದ್ದು ಮೋದಿ ಭಗೀರಥ ಪ್ರಯತ್ನ: ಸಿಎಂ