ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರ ಸ್ವಂತ ಜಿಲ್ಲೆ ವಿಜಯಪುರದಲ್ಲಿ ಬ್ಯಾನ್ ಆದ ಆಸ್ಪತ್ರೆ ಈಗಲು ನಡೆಯುತ್ತಿದ್ದು, ಜನರಿಗೆ ಇಲ್ಲದ ರೋಗಗಳ ಹೆಸರು ಹೇಳಿ ವೈದ್ಯ ಹಗಲು ದರೋಡೆ ಮಾಡುತ್ತಿದ್ದಾನೆ.
ಸುರೇಶ್ ಎಂ ಕಾಗಲಕರ ರೆಡ್ಡಿ ಜನರಿಂದ ದರೋಡೆ ಮಾಡುತ್ತಿರುವವರ ವೈದ್ಯ. ಸುರೇಶ್ ಮೂತ್ರ ರೋಗ, ಜನನಾಂಗ ಮತ್ತು ಜನರಲ್ ಸರ್ಜನ್ ಆಗಿದ್ದು, ವಿಜಯಪುರದ ಮೀನಾಕ್ಷಿಚೌಕ್‍ನಲ್ಲಿ ಕಿಡ್ನಿಕೇರ್ ಎಂಬ ಆಸ್ಪತ್ರೆ ತೆರೆದಿದ್ದಾನೆ.
Advertisement
Advertisement
ಮುರುಗೇಶ್ ಸಂಗಮ ಎಂಬವರು ಈತ ನಡೆಸುತ್ತಿರುವ ಆಸ್ಪತ್ರೆ ಕ್ಲೀನ್ ಇಲ್ಲ, ಒಳರೋಗಿಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ದೂರು ನೀಡಿದ್ದರು. ದೂರಿನ ಅನ್ವಯ ಜಿಲ್ಲಾ ವೈದ್ಯಾಧಿಕಾರಿಗಳು ಜೂನ್ 15ರಂದು ಸುರೇಶ್ ನೊಂದಣಿಯನ್ನು ಅಮಾನತುಗೊಳಿಸಿದ್ದಾರೆ. ಆದರೆ ಇದಕ್ಕೆ ಬೆಲೆ ಕೊಡದ ಸುರೇಶ್ ಆಸ್ಪತ್ರೆ ಮುಂದುವರಿಸಿದ್ದಾನೆ. ನಿಷೇಧಗೊಂಡಿದ್ದರೂ ಆಸ್ಪತ್ರೆ ನಡೆಸುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ದೂರಿದ್ದಾರೆ.
Advertisement
Advertisement
ಅಡ್ಮಿಟ್ ಆಗಿ ಎಂದಿದ್ದ:
ಕಳೆದ ಅಕ್ಟೋಬರ್‍ನಲ್ಲಿ ಬಸವರಾಜ ಎಂಬವರು ನಗರದ ಆಲ್ ಅಮೀನ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ತಮಗೆ ಕಿಡ್ನಿ ಸ್ಟೋನ್ ಆಗಿದೆ ಅಂತಾ ತಪಾಸಣೆ ನಡೆಸಿದ್ದರು. ಆದರೆ ಸ್ಕ್ಯಾನಿಂಗ್ ವೇಳೆ ಕಿಡ್ನಿ ಸ್ಟೋನ್ ಇಲ್ಲ ಅಂತಾ ರಿಪೋರ್ಟ್ ಬಂದಿರುತ್ತದೆ. ನಂತರ ಬಸವರಾಜ ಮರುದಿನ ವೈದ್ಯ ಸುರೇಶ್ ಬಳಿ ಬಂದು ಹೊಟ್ಟೆಯ ಕೆಳಭಾಗದಲ್ಲಿ ನೋವಿದೆ ಅಂತಾ ಹೇಳುತ್ತಾರೆ. ಆಗ ತಪಾಸಣೆ ನಡೆಸಿದ ಸುರೇಶ್ ಹೌದು ಒಳಗಡೆ ಕೀವು ತುಂಬಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಾಗಿ 40ರಿಂದ 50 ಸಾವಿರ ಹಣ ಖರ್ಚಾಗತ್ತೆ. ಈಗಾಗಲೇ ತುಂಬ ತಡ ಮಾಡಿದ್ದೀರಿ ಅಂತಾ ಸುಳ್ಳು ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಬಸವರಾಜ್ ಈತನ ಸಹವಾಸ ಬೇಡ ಎಂದು ತಿಳಿದು ಕಾಲ್ಕಿತ್ತಿದ್ದಾರೆ.