ಅಸ್ತಾನಾ: ವೈದ್ಯರು ಹುಡುಗನೊಬ್ಬನ ಕಿವಿಯಲ್ಲಿದ್ದ ಹುಳುಗಳನ್ನ ಜೀವಂತವಾಗಿ ಹೊರತೆಗೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿರೋದು ಕಜಕಿಸ್ತಾನದಲ್ಲಿ. ಹುಡುಗನೊಬ್ಬ ಕಿವಿ ನೋವೆಂದು ವೈದ್ಯರ ಬಳಿ ಹೋಗಿದ್ದ. ಆದ್ರೆ ನಂತರ ವೈದ್ಯರು ಆತನ ಕಿವಿಯಿಂದ ಸುಮಾರು 15-20ಕ್ಕೂ ಜೀವಂತ ಹುಳುಗಳನ್ನ ಹೊರತೆಗೆದಿದ್ದು, ಇದನ್ನು ನೋಡಿದ ಪ್ರತ್ಯಕ್ಷದರ್ಶಿಗು ಆಶ್ಚರ್ಯಗೊಂಡ್ರು. ವೈದ್ಯರು ಚಿಮುಟದ ಸಹಾಯದಿಂದ ಒಂದೊಂದೇ ಹುಳುವನ್ನ ಹೊರತೆಗೆದು ಸರ್ಜಿಕಲ್ ಡಿಶ್‍ನಲ್ಲಿ ಹಾಕಿದ್ದಾರೆ. ವೈದ್ಯರು ಎಲ್ಲಾ ಹುಳುವನ್ನ ಹೊರತೆಗೆಯೋ ವೇಳೆಗೆ ಸುಮಾರು 20ಕ್ಕೂ ಹೆಚ್ಚು ಹುಳುಗಳು ಆ ಸ್ಟೀಲ್ ಪಾತ್ರೆಯಲ್ಲಿದ್ದವು. ಅಲ್ಲದೆ ಅವು ಇನ್ನೂ ಜೀವಂತವಾಗಿದ್ದು ನೋಡುಗರ ಮೈ ಜುಮ್ಮೆನುಸುವಂತೆ ಮಾಡುತ್ತದೆ.
Advertisement
Advertisement
ಈ ಎಲ್ಲಾ ದೃಶ್ಯವನ್ನ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದು, ಆನ್‍ಲೈನ್‍ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿ ಹುಳು ಸುಮಾರು 1 ಸೆಂಟಿಮೀಟರ್‍ನಷ್ಟು ಉದ್ದವಿದ್ದು, ಇವು ಬ್ಲೂಬಾಟಲ್ ಎಂಬ ಹುಳುವಿನ ಮರಿಗಳು ಎಂದು ವರದಿಯಾಗಿದೆ.
Advertisement
Advertisement
ಹುಳು ಹುಡುಗನ ಕಿವಿಯಲ್ಲಿ ಮೊಟ್ಟೆಯಿಟ್ಟಿದ್ದು, ಅವು ಬಳಿಕ ಮೊಟ್ಟೆಯೊಡೆದು ಹೊರಗೆ ಬಂದು ಹುಡುಗನ ಕಿವಿಯ ಮಾಂಸವನ್ನ ತಿಂದು ಜೀವಿಸುತ್ತಿದ್ದವು ಎಂದು ಹೇಳಲಾಗಿದೆ. ಒಂದು ವೇಳೆ ಹುಳುವನ್ನ ಹೊರಗೆ ತೆಗೆಯದೇ ಹಾಗೇ ಬಿಟ್ಟಿದ್ದರೆ ಅವು ಹುಡುಗನ ಮೆದುಳನ್ನ ಕೊರೆದು ಆತ ಸಾವನ್ನಪ್ಪುವ ಸಂಭವವಿತ್ತು ಎಂದು ವರಿಯಾಗಿದೆ.
https://www.youtube.com/watch?v=Dc–yWAMoXQ