– ಹೆಬ್ಬಾಳ್ಕರ್ ಸಹೋದರನ ತಲೆಗೆ ಪೆಟ್ಟು
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ಅವರು ಕಾರು ಅಪಘಾತದಲ್ಲಿ ಗಾಯಗಳಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಚಿವೆ ಬೆನ್ನುಮೂಳೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಬೆಳಗ್ಗೆ ಸರಿಸುಮಾರು ಆರು ಗಂಟೆಗೆ ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವೆ ಲಕ್ಷ್ಮಿ ಅವರಿಗೆ ಬೆನ್ನುಮೂಳೆಯ ಎಲ್1 ಎಲ್4 ಮೂಳೆಯಲ್ಲಿ ಬಲವಾದ ಪೆಟ್ಟಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಚಿವೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಡಾ. ರವಿ ಪಾಟೀಲ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರಾದ ಸಚಿವೆ
Advertisement
Advertisement
ಸಚಿವರ ಜೊತೆ ಅವರ ಸಹೋದರ, ಗನ್‌ಮ್ಯಾನ್, ಡ್ರೈವರ್ ಬಂದಿದ್ದಾರೆ. ಎಲ್ಲರಿಗೂ ನಾವು ಚಿಕಿತ್ಸೆ ಕೊಟ್ಟಿದ್ದೇವೆ. ಹೆಬ್ಬಾಳ್ಕರ್ ಅವರ ಆರೋಗ್ಯ ಚೇತರಿಕೆ ಆಗ್ತಿದೆ. ಪೇಯ್ನ್ಕಿಲ್ಲರ್ ಇಂಜೆಕ್ಷನ್, ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಬಲವಾದ ಪೆಟ್ಟು ಬೆನ್ನಿನ ಮೂಳೆ ಮುರಿದಿದೆ. ಇನ್ನೆರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡ್ತೀವಿ ಎಂದು ತಿಳಿಸಿದ್ದಾರೆ.
Advertisement
ಆಸ್ಪತ್ರೆಗೆ ಬಂದ ವೇಳೆ ಸ್ಥಿತಿ ಗಂಭೀರವಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಎಂಆರ್‌ಐ ಸ್ಕ್ಯಾನ್ ಮಾಡಿದ್ದೇವೆ. ಎಲ್1ಎಲ್4 ಮೂಳೆಗೆ ಪೆಟ್ಟಾಗಿದೆ. ಬೆನ್ನಿನ 2 ಮೂಳೆಗಳು ಮುರಿದಿವೆ. ಅವರು 1 ತಿಂಗಳು ಬೆಡ್ ರೆಸ್ಟ್ ಮಾಡಬೇಕು ಎಂದಿದ್ದಾರೆ.