ಬೆಂಗಳೂರು: ವೈದ್ಯರು ಸತತ ಮೂರು ಗಂಟೆಗಳ ಕಾಲ ಚಿಕಿತ್ಸೆ ನೀಡಿದ್ದರೂ ಅವರ ಪ್ರಯತ್ನಕ್ಕೆ ಪುನೀತ್ ರಾಜ್‍ಕುಮಾರ್ ದೇಹ ಸ್ಪಂದಿಸಲಿಲ್ಲ.
Advertisement
ಹೃದಯಾಘಾತದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಇದು ಸಾಯುವ ವಯಸ್ಸು ಅಲ್ಲ: ನರೇಂದ್ರ ಮೋದಿ
Advertisement
ಪ್ರತಿನಿತ್ಯ ಮಾಡುವಂತೆ ಇಂದೂ ಪುನೀತ್ ಜಿಮ್‍ನಲ್ಲಿ ಕಸರತ್ತು ನಡೆಸಿದ್ದಾರೆ. ಸತತ ಎರಡು ಗಂಟೆ ವ್ಯಾಯಾಮ ಮಾಡಿದ ಬಳಿಕ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ
Advertisement
ವಿಕ್ರಂ ಆಸ್ಪತ್ರೆಯ ವೈದ್ಯ ಡಾ. ರಂಗನಾಥ್ ಮಾತನಾಡಿ, ಎದೆ ನೋವು ಎಂದು ಪುನೀತ್ ರಾಜ್‍ಕುಮಾರ್ ಅವರು ಕುಟುಂಬದ ವೈದ್ಯರ ಬಳಿ ಹೋಗಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿದಾಗ ಹೃದಯಾಘಾತವಾಗಿರುವುದು ತಿಳಿದುಬಂದಿದೆ. ಅಲ್ಲಿಂದ ನೇರವಾಗಿ ವಿಕ್ರಮ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗುತ್ತಿತ್ತು. ಮಾರ್ಗ ಮಧ್ಯೆದಲ್ಲಿಯೇ ಅವರಿಗೆ ಹಾರ್ಟ್ ಅಸಿಸ್ಟೋಲ್ (ಹೃದಯದ ಚಲನೆ ನಿಲ್ಲುವುದು) ಆಗಿತ್ತು. ಭಾರೀ ಹೃದಯಾಘಾತವೇ ಆಗಿತ್ತು ಎಂದು ಹೇಳಿದ್ದಾರೆ.
Advertisement
ಆದರೂ ಮೂರು ಗಂಟೆಗಳ ಕಾಲ ಅವರನ್ನು ವೆಂಟಿಲೇಟರ್‍ನಲ್ಲಿಟ್ಟು ಬದುಕುಳಿಸಲು ನಾನಾ ರೀತಿಯಲ್ಲಿ ಪ್ರಯತ್ನ ಪಟ್ಟೆವು. ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಹಾರ್ಟ್ ಅಸಿಸ್ಟೋಲ್ ಸ್ಥಿತಿಯಲ್ಲೇ ಇತ್ತು. ವೈದ್ಯರ ತಂಡ ಸಾಕಷ್ಟು ಪ್ರಯತ್ನಪಟ್ಟರು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುರುವಾರ ಮಧ್ಯಾಹ್ನ 2.30ರ ಹೊತ್ತಿಗೆ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಘೋಷಿಸಲೇಬೇಕಾಯಿತು ಎಂದು ವೈದ್ಯರು ತಿಳಿಸಿದ್ದಾರೆ.