ರಾಂಚಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಇಬ್ಬರು ಯುವಕರಿಗೆ ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಸರಿಯಾಗಿ ತಪಾಸಣೆ ಮಾಡದೇ, ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈಗ ಬಾರಿ ಚರ್ಚೆಯಾಗುತ್ತಿದೆ.
ಜಾರ್ಖಂಡಿನ ಚತ್ರ್ ಜಿಲ್ಲೆಯ ಸಿಮಾರಿಯಾದ ರೆಫರೆಲ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 1 ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಮುಕೇಶ್ ವಿರುದ್ಧ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
Advertisement
Advertisement
ಗೋಪಾಲ್ ಗಂಜು(22) ಹಾಗೂ ಕಾಮೇಶ್ವರ ಗಂಜು(26) ಅವರಿಗೆ ವೈದ್ಯ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ ಎನ್ನಲಾಗಿದೆ. ಇಬ್ಬರು ಯುವಕರು ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆದ್ದರಿಂದ ಯುವಕರನ್ನು ಅವರ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮುಕೇಶ್ ಅವರಿಬ್ಬರಿಗೂ ಕಾಟಾಚಾರಕ್ಕೆ ತಪಾಸಣೆ ಮಾಡಿ, ಎಚ್‍ಐವಿ, ಎಚ್‍ಬಿಎ, ಎಚ್‍ಸಿವಿ, ಸಿಬಿಸಿ, ಎಚ್‍ಎಚ್2 ಮತ್ತು ಎಎನ್‍ಸಿ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಚೀಟಿ ಬರೆದು ಕೊಟ್ಟಿದ್ದರು. ಜೊತೆಗೆ ಪ್ರಗ್ನೆನ್ಸಿ ಪರೀಕ್ಷೆ ಕೂಡ ಮಾಡಿಸಿಕೊಂಡು ಬರಲು ಬರೆದಿದ್ದಾರೆ.
Advertisement
Advertisement
ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‍ಗೆ ಹೋದಾಗ ಅಲ್ಲಿನ ಸಿಬ್ಬಂದಿ ಚೀಟಿ ನೋಡಿ ದಂಗಾಗಿದ್ದಾರೆ. ಪ್ರಗ್ನೆನ್ಸಿ ಪರೀಕ್ಷೆ ನಿಮಗಲ್ಲ ಮಹಿಳೆಯರಿಗೆ ಮಾಡುವುದು ಎಂದು ತಿಳಿಸಿದ್ದಾರೆ. ಬಳಿಕ ಯುವಕರು ಯಾವ ಪರೀಕ್ಷೆಯನ್ನೂ ಕೂಡ ಮಾಡಿಸದೆ ಮನೆಗೆ ವಾಪಸ್ ಬಂದಿದ್ದಾರೆ.
ನಂತರ ನಡೆದ ಘಟನೆ ಬಗ್ಗೆ ನಮ್ಮ ಊರಿನಲ್ಲಿ ಹೇಳಿದ್ದಾರೆ. ಈ ಸುದ್ದಿ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ತಿಳಿದು ಇಡೀ ಜಾರ್ಖಂಡಿನಲ್ಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದ್ರೆ ವೈದ್ಯ ಮಾತ್ರ ಇದು ಸುಳ್ಳುಸುದ್ದಿ. ನನ್ನ ಹೆಸರನ್ನು ಹಾಳು ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದೊಂದು ಪಿತೂರಿ, ನಾನು ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.