ವಿಜಯಪುರ: ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ವೈದ್ಯರೊಬ್ಬರು ಡೈರೆಕ್ಟಾಗಿ ಇಂಜೆಕ್ಷನ್ ನೀಡಿ ರೋಗಿಗಳ ಜೀವನದಲ್ಲಿ ಚೆಲ್ಲಾಟವಾಡಿದ ಘಟನೆ ವಿಜಯಪುರದ ಸ್ಟೇಷನ್ ರಸ್ತೆಯ ಬಳಿ ನಡೆದಿದೆ.
ಡಾ. ಸಚಿನ್ ವಿಚಿತ್ರ ವೈದ್ಯ. ಸಚಿನ್ ರೋಗಿಗಳ ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ಡೈರೆಕ್ಟಾಗಿ ಬಟ್ಟೆ ಮೇಲಿಂದಾನೆ ನರ ಗುರುತಿಸಿ ಇಂಜೆಕ್ಷನ್ ನೀಡುತ್ತಿದ್ದಾನೆ. ವೈದ್ಯರು ಈ ರೀತಿ ಇಂಜೆಕ್ಷನ್ ನೀಡುತ್ತಿರುವುದನ್ನು ಗಮನಿಸಿದ ರೋಗಿಗಳು ಹೀಗೆ ಮಾಡಬೇಡಿ ಅಂತಾ ಹೇಳಿದ್ರು ಅವರ ಮಾತನ್ನು ಕೇಳುತ್ತಿಲ್ಲ.
Advertisement
ಈ ಆಸ್ಪತ್ರೆಗೆ ಬರಲು ರೋಗಿಗಳು ಹೆದರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದಲೂ ಡಾ. ಸಚಿನ್ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೇ ಇನ್ಫೆಕ್ಷನ್ ಆಗುವುದಿಲ್ಲ ಎಂದು ರೋಗಿಗಳು ಕೇಳಿದ್ದರೆ ಇಲ್ಲ ಎಂದು ವೈದ್ಯ ಪ್ರತಿಕ್ರಿಯೆ ನೀಡುತ್ತಾರೆ.
Advertisement
Advertisement
ಈ ಪ್ರಕರಣದ ಬಗ್ಗೆ ಮೈಸೂರಿನ ಕೆ. ಆರ್ ಆಸ್ಪತ್ರೆಯ ಡಾ. ಯೋಗೇಶ್ ಮಾತನಾಡಿ, ಬಟ್ಟೆ ತೆಗೆಯದೇ ಇಂಜೆಕ್ಷನ್ ಹಾಗೇ ನೀಡುವುದರಿಂದ ಬಟ್ಟೆಯಲ್ಲಿರುವ ಧೂಳು, ಬ್ಯಾಕ್ಟೀರಿಯಾ, ಸೋಂಕು ಎಲ್ಲ ದೇಹದೊಳಗೆ ಹೋಗುತ್ತದೆ. ಇದರಿಂದ ಆ ಜಾಗದಲ್ಲಿ ಪ್ಯಾರಲಿಸೀಸ್, ಒಬ್ಸೆಸ್ ಆಗುವ ಸಾಧ್ಯತೆಗಳಿವೆ. ಅಲ್ಲದೇ ಡೆಡ್ಲಿ ಇನ್ಫೆಕ್ಷನ್‍ಗಳಾದ ಸ್ಟೇಟನಸ್, ಗ್ಯಾಸ್ ಗ್ಯಾಂಗ್ರಿನ್ ಆದರೆ ಬದುಕುವುದು ಕಷ್ಟ ಎಂದು ಹೇಳಿದ್ದಾರೆ.
Advertisement
ಇಂಜೆಕ್ಷನ್ ಅನ್ನು ಇದೇ ಜಾಗದಲ್ಲೇ ಕೊಡಬೇಕು ಎಂದು ಎಂಬಿಬಿಎಸ್ ನಲ್ಲಿ ಹೇಳಿಕೊಡುತ್ತಾರೆ. ಆ ನರಗಳಿಗೆ ಗಾಯಗಳಾಗಬಾರದು ಎಂದು ನರಗಳ ಮೇಲೆ ಇಂಜೆಕ್ಷನ್ ನೀಡಲಾಗುತ್ತದೆ. ಎಲ್ಲಿ ಆ ನರ ಓಡಾಡುತ್ತೆ ಆ ನರಗಳಿಗೆ ಇಂಜೆಕ್ಷನ್ ಕೊಡಿ ಎಂದು ಹೇಳಿಕೊಡಲಾಗುತ್ತದೆ ಎಂದು ಯೋಗೇಶ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಇಂಪ್ಯಾಕ್ಟ್:
ವೈದ್ಯನ ಚೆಲ್ಲಾಟದ ವರದಿ ಪಬ್ಲಿಕ್ ಟಿವಿ ಪ್ರಸಾರ ಮಾಡುತ್ತಿದ್ದಂತೆಯೇ ವೈದ್ಯ ಸಚಿನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಎಚ್‍ಒ ರಾಜ್ ಕುಮಾರ್ ಭರವಸೆ ನೀಡಿದ್ದು, ಇಂದೇ ಈ ಕುರಿತು ಪರಿಶೀಲನೆಗೆ ತಂಡ ಕಳುಹಿಸೋದಾಗಿ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews