ಭೋಪಾಲ್: ಮಹಾಮಾರಿ ಕೊರೊನಾ ವೈರಸ್‍ಗೆ ಇಂದೋರ್ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ.
62 ವರ್ಷದ ಶತ್ರುಘ್ನ ಪಂಜ್ವಾನಿ ಮೃತ ವೈದ್ಯ. ಜನರಲ್ ಫಿಶಿಸಿಯನ್ ಆಗಿದ್ದ ಶತ್ರುಘ್ನ ಅವರಿಗೆ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ದೇಶದಲ್ಲಿ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ ಮೊದಲ ವೈದ್ಯರಾಗಿದ್ದಾರೆ.
Advertisement
Advertisement
ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಶತ್ರುಘ್ನ ಅವರನ್ನು ಅರವಿಂದ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತ ವೈದ್ಯನ ಪತ್ನಿ ಮತ್ತು ಮೂವರು ಗಂಡು ಮಕ್ಕಳು ಆಸ್ಟ್ರೇಲಿಯಾದಲ್ಲಿದ್ದಾರೆ ಎಂದು ವರದಿಯಾಗಿದೆ. ಡಾ.ಶತ್ರುಘ್ನ ಅವರ ಬಳಿ ಸ್ಲಂ ಪ್ರದೇಶದಲ್ಲಿ ವಾಸವಾಗಿದ್ದ ರೋಗಿಗಳು ಬರುತ್ತಿದ್ದರು ಎಂದು ಸಹೋದ್ಯೋಗಿ ಡಾ.ಡಿ.ನಟ್ವರ್ ಹೇಳಿದ್ದಾರೆ.
Advertisement
Advertisement
ಮಧ್ಯಪ್ರದೇಶದಲ್ಲಿ ಇದುವರೆಗೂ 173 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ಇಂದೋರ್, ಭೋಪಾಲ್ ಮತ್ತು ಉಜೈನಿ ಕೊರೊನಾ ಹಾಟ್‍ಸ್ಪಾಟ್ ಗಳಾಗಿವೆ.