ಲಕ್ನೋ: ಖಿನ್ನತೆಗೆ ಒಳಗಾಗಿದ್ದ ವೈದ್ಯನೊಬ್ಬ ಪತ್ನಿ ಹಾಗೂ ಮಕ್ಕಳನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಕಲ್ಯಾಣ್‍ಪುರ ಪ್ರದೇಶದಲ್ಲಿ ನಡೆದಿದೆ.
Advertisement
ಘಟನೆ ಬಳಿಕ ಪರಾರಿಯಾಗಿರುವ ವೈದ್ಯ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಿದೆ. ಕೊಲೆ ಮಾಡಿರುವ ವಿಚಾರ ಕುರಿತಂತೆ ಆರೋಪಿ ತನ್ನ ಸಹೋದರನಿಗೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಮುಂಚೂಣಿ ಕಾರ್ಯಕರ್ತರಾಗಿ 10 ತಿಂಗಳ ಬಳಿಕ ಲಸಿಕೆಯ ಮೊದಲ ಡೋಸ್ ಪಡೆದ ʼಮಹಾʼ ಸರ್ಕಾರದ ಸಿಎಸ್
Advertisement
@kanpurnagarpol के थाना क्षेत्र कल्याणपुर में ट्रिपल मर्डर प्रकरण के सम्बन्ध में पुलिस उपायुक्त पश्चिम द्वारा दी गई बाइट । @Uppolice pic.twitter.com/li2qPRB3xX
— POLICE COMMISSIONERATE KANPUR NAGAR (@kanpurnagarpol) December 3, 2021
Advertisement
ಆರೋಪಿಯ ಸಹೋದರ ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ತನ್ನ ಪತ್ನಿ ಹಾಗೂ ಮಕ್ಕಳಿಬ್ಬರನ್ನು ಹತ್ಯೆಗೈದು ನಂತರ ವಾಟ್ಸಾಪ್‍ನಲ್ಲಿ ಸಹೋದರನಿಗೆ ಮಾಹಿತಿ ನೀಡಿದ್ದು, ತಾನು ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾನೆ. ಸದ್ಯ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ
Advertisement