ಗದಗ್: ಈ ಕಾಲದಲ್ಲಿ ವೈದ್ಯರು ಅಂದ್ರೆ ಬಹುತೇಕರಲ್ಲಿ ಹಣ ಮಾಡೋದೇ ಕಾಯಕ ಅಂತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ. ಕಲ್ಲೇಶ್ ಅವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.
ನಗರದ ನಿವಾಸಿ ಡಾಕ್ಟರ್ ಕಲ್ಲೇಶ್ ಮೂರಶಿಳ್ಳಿನ ಸಿಟಿಯಲ್ಲಿ ಕೈ ತುಂಬ ಸಂಪಾದನೆ ಮಾಡೋದು ಬಿಟ್ಟು ಹಳ್ಳಿಯ ಬಡಜನರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ತೆರೆದಿದ್ದು, ರೋಗಿಗಳಿಂದ 10 ರಿಂದ 30 ರೂಪಾಯಿ ಮಾತ್ರ ತೆಗೆದುಕೊಳ್ತಾರೆ. ತುಂಬಾ ಬಡವರು, ವಯಸ್ಕರು ಬಂದ್ರೆ ನಯಾ ಪೈಸೆ ಪಡೆಯಲ್ಲ. ಹೀಗೆ, 22 ವರ್ಷಗಳಿಂದ ಸೇವೆ ಸಾಗಿದೆ.
Advertisement
Advertisement
ವೈದ್ಯರಾಗಿ ಮಾತ್ರವಲ್ಲ, ಪರಿಸರ ಪ್ರೇಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಯೋಗಪಟುವಾಗಿ ಸಮಾಜ ಸೇವಕರಾಗಿ ಶ್ರಮಿಸುತ್ತಿದ್ದಾರೆ. ಬಡ ಕುಟುಂಬದಿಂದ ಬಂದವನಾಗಿರೋ ನನಗೆ ಬಡವರ ಕಷ್ಟ ಗೊತ್ತಿದೆ. ಅದಕ್ಕಾಗಿ ನನ್ನಿಂದ ಆಗೋ ಕೆಲಸವನ್ನ ಮಾಡ್ತಿದ್ದೇನೆ ಅಂತ ಡಾಕ್ಟರ್ ಕಲ್ಲೇಶ್ ಹೇಳ್ತಾರೆ.
Advertisement
ಹಳ್ಳಿಗಳ ಸುಧಾರಣೆ, ಕುಡಿಯುವ ನೀರು, ಮೂಲಭೂತ ಸೌಲಭ್ಯಗಳು, ದೇವಸ್ಥಾನ, ಮಠ, ಮಸೀದಿ, ಮಂದಿರ ಅಭಿವೃದ್ಧಿಗೆ ಪ್ರತಿ ವರ್ಷ ಲಕ್ಷಾಂತರ ನೀಡುತ್ತಿದ್ದಾರೆ. ಪರಿಸರ ಕಾಳಜಿ, ಸಾಮಾಜಿಕ ಕಾರ್ಯಗಳ ಬಗ್ಗೆ ಅನೇಕ ಕಥೆ, ಕಾದಂಬರಿ ಬರೆದಿದ್ದಾರೆ. ಪ್ರತಿಷ್ಠೆಯ ಈ ದಿನಮಾನದಲ್ಲೂ ಗದಗ್‍ನಿಂದ ಮಲ್ಲಸಮುದ್ರ ಗ್ರಾಮಕ್ಕೆ ನಿತ್ಯ 8 ರಿಂದ 10 ಕಿಲೋಮೀಟರ್ ಸೈಕಲ್ ತುಳಿದು ಬರುತ್ತಾರೆ ಅಂತ ಸ್ಥಳೀಯರಾದ ಶಿವಪ್ಪ ತಿಳಿಸಿದ್ದಾರೆ.
Advertisement
ಪತ್ನಿ ಸಹ ವೈದ್ಯರಾಗಿದ್ದು, ಆಸ್ಪತ್ರೆ ಕೆಲಸದ ನಂತರ ಜೊತೆಗೆ ಸ್ವಂತ ಜುವೇಲರಿ ಶಾಪ್ ಅನ್ನ ಇಬ್ಬರೂ ನಿರ್ವಹಿಸ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=TTCkvOSxBz4