ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ರೋಗಿಗಳ ಮೇಲೆ ಗೂಂಡಾ ವರ್ತನೆ ತೋರಿದ್ದು, ಇದನ್ನು ಪಶ್ನಿಸಿದ ಮಾಧ್ಯಮ ಸಿಬ್ಬಂದಿ ಮೇಲೂ ಅವಾಜ್ ಹಾಕಿದ್ದಾರೆ.
ಆಸ್ಪತ್ರೆಯ ವೈದ್ಯೆ ನಳಿನಿ ಗೂಂಡಾ ವರ್ತನೆ ತೋರಿದ್ದಾರೆ. ಬಳ್ಳಾರಿ ಜಿಲ್ಲೆಯ ಹೋಸಪೇಟೆ ತಾಲೂಕಿನ ಗೋನಾಳ ಗ್ರಾಮದ ಪಾಶ್ರ್ವವಾಯುಗೆ ತುತ್ತಾಗಿದ್ದ ಚಂದ್ರಮ್ಮ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಈ ವೇಳೆ ಡ್ಯೂಟಿಯಲ್ಲಿದ್ದ ಡಾಕ್ಟರ್ ನಳಿನಿ ನಿದ್ದೆಯಲ್ಲಿದ್ದರು. ಚಂದ್ರಮ್ಮ ಆಸ್ಪತ್ರೆಯ ತುರ್ತು ಚಿಕ್ಸಿತ್ಸೆ ಘಟಕದಲ್ಲೇ ಅಕ್ಸಿಜನ್ ಇಲ್ಲದೆ ಪರದಾಡಿದ್ದಾರೆ.
ಕೊನೆಗೆ ಚಂದ್ರಮ್ಮ ಸಂಬಂಧಿ ಮಾಧ್ಯಮದವರ ಮೊರೆ ಹೋಗಿದ್ದಾರೆ. ಸ್ಥಳಕ್ಕೆ ತೆರಳಿದ ಮಾಧ್ಯಮದವರನ್ನು ಕಂಡ ಡಾಕ್ಟರ್ ನಳಿನಿ ಗರಂ ಆಗಿ ಕ್ಯಾಮೆರಾವನ್ನು ತಳ್ಳಿ ಅಧಿಕಾರ ದರ್ಪ ಮೆರೆದಿದ್ದಾರೆ.