ಚಿಕ್ಕಮಗಳೂರು: ರಕ್ತ ಟೆಸ್ಟ್ ಮಾಡ್ತೀನಿ ಅಂತ ಸೂಜಿಯಲ್ಲಿ ಮುಖಕ್ಕೆ ಚುಚ್ತಾನೆ. ನಿಮಗೆ ಏಡ್ಸ್ ಇದೆ ಅಂತಾನೆ. ನರ್ಸ್‍ಗೆ ನಿನ್ನ ಏಪ್ರಾನ್ ಬಿಚ್ಚು, ಬಿಪಿ ಟೆಸ್ಟ್ ಮಾಡ್ಬೇಕು ಅಂತಾ ಎಳೆದಾಡ್ತಾನೆ. ರಾತ್ರಿ ಆಸ್ಪತ್ರೆಗೆ ಬರೋ ರೋಗಿಗಳಿಂದ ಒಂದೊಂದು ಬಾಟಲಿ ರಕ್ತ ತೆಗೆದುಕೊಳ್ಳಿ ಎಂದು ಶೂಶ್ರುಕಿಯರಿಗೆ ಸೂಚಿಸ್ತಾನೆ. ಹೌದು ಚಿಕ್ಕಮಗಳೂರನಲ್ಲಿ ಇಂತಹ ಮೆಂಟಲ್ ಡಾಕ್ಟರ್‍ವೊಬ್ಬ ಇದ್ದಾನೆ.
Advertisement
ಆತನ ಹೆಸರು ವೀರೇಶ್ ವೈ ನರೇಗಲ್. ಎಂಬಿಬಿಎಸ್, ಡಿ ಆರ್ಥೋ ಅಂಡ್ ಎಂಎಸ್ ಆರ್ಥೋ ಓದಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್. 35 ವರ್ಷ ಸರ್ವೀಸ್ ಇರೋ ಈತ ಇಲ್ಲಿಗೆ ಬಂದು ವರ್ಷವಾಗಿದೆ. ಸುಸ್ತು, ಜ್ವರ ಅಂತ ಆಸ್ಪತ್ರೆಗೆ ಬಂದ ರೋಗಿಗೆ ಯಾವುದೇ ರೀತಿಯ ಬ್ಲಡ್ ಟೆಸ್ಟ್ ಮಾಡ್ದೆ ನಿನಗೆ ಏಡ್ಸ್ ಇದೆ. ಬೆಂಗಳೂರು ಅಥವಾ ಮಂಗಳೂರಿಗೆ ಹೋಗಿ ಅಂತ ರೆಫರ್ ಮಾಡಿದ್ದಾನೆ. ಹೀಗಾಗಿ ರೋಗಿ ಭಯ ಬಿದ್ದು ಬ್ಲಡ್ ಟೆಸ್ಟ್ ಮಾಡಿಸಿದ್ರೆ ಯಾವ ಏಡ್ಸ್ ಕೂಡ ಇರಲಿಲ್ಲ.
Advertisement
Advertisement
ಇನ್ನೊಂದು ಕೇಸ್ ನೋಡೋದಾದ್ರೆ ಕಾಲು ನೋವು ಅಂತಾ ವಯೋವೃದ್ಧೆಯೊಬ್ಬರು ಬಂದ್ರೆ ರಕ್ತ ಟೆಸ್ಟ್ ಮಾಡ್ತೀನಿ ಅಂತಾ ಸೂಜಿ ತಗೊಂಡು ಮೂಗು, ಮುಖ, ಹಣೆಗೆಲ್ಲಾ ರಕ್ತ ಬರುವಂತೆ ಚುಚ್ಚಿದ್ದಾನೆ. ಡ್ಯೂಟಿ ಮಾಡ್ತಿದ್ದ ಸಿಸ್ಟರ್ ಬಳಿ ಬಂದು ನಿನ್ನ ಏಪ್ರೋನ್ ಬಿಚ್ಚು, ನಿನಗೆ ಬಿಪಿ ಚೆಕ್ ಮಾಡ್ಬೇಕು ಅಂತ ಹಿಂಸೆ ನೀಡಿದ್ದಾನೆ.
Advertisement
ಈ ಡಾಕ್ಟರ್‍ನ ಇನ್ನಷ್ಟು ಪುರಾಣ ನೋಡೋದಾದ್ರೆ, ಹೆರಿಗೆಯಾದ ಮಹಿಳೆಗೆ ಯಾವ್ಯಾವುದೋ ಔಷಧಿ ಕೊಡ್ತಾನೆ. ನೈಟ್ ಡ್ಯೂಟಿ ಮಾಡೋ ಡಿ ದರ್ಜೆ ನೌಕರರ ಮೇಲೆ ಕಾರಣವಿಲ್ಲದೆ ಕಂಪ್ಲೆಂಟ್ ಕೊಡ್ತಾನೆ. ಹೀಗಾಗಿ ಡಾಕ್ಟರ್ ಮೇಲೆ ನರ್ಸ್‍ಗಳೇ ದೂರು ನೀಡಿದ್ದಾರೆ.
ಒಟ್ನಲ್ಲಿ ಈ ವೈದ್ಯನ ಹುಚ್ಚಾಟಕ್ಕೆ ಆಸ್ಪತ್ರೆಯ ಸಿಬ್ಬಂದಿಗಳೇ ಬೆಚ್ಚಿ ಬಿದ್ದಿದ್ದಾರೆ.