ಮೈಸೂರು: ಕೆ.ಆರ್. ಆಸ್ಪತ್ರೆ ವೈದ್ಯರ ಕಾಮನ್ ಸೆನ್ಸ್‍ನಿಂದ ವಿಷ ಪ್ರಸಾದ ಪ್ರಕರಣವನ್ನು ಶೀಘ್ರವೇ ಬೇಧಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹೌದು, ವಿಷ ಪ್ರಸಾದ ಪ್ರಕರಣದ ಮೊದಲ ಸುಳಿವನ್ನು ಪೊಲೀಸರ ಕೆ.ಆರ್ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಆರೋಪಿ ನಾಗರಕೊಯಿಲು ದೇವಾಲಯದ ಅರ್ಚಕ ದೊಡ್ಡಯ್ಯ ಪ್ರಕರಣ ನಡೆದ ಸಂಜೆ ಎಲ್ಲಾ ಅಸ್ವಸ್ಥರ ಜೊತೆ ತಾನೂ ಕೂಡ ವಿಷ ಆಹಾರ ಸೇವಿಸಿದ್ದೇನೆ ಎಂದು ಕೆ.ಆರ್. ಆಸ್ಪತ್ರೆಗೆ ದಾಖಲಾಗುತ್ತಾನೆ.
Advertisement
Advertisement
ಆಸ್ಪತ್ರೆಗೆ ದಾಖಲಾದ ದೊಡ್ಡಯ್ಯ ವೈದ್ಯರು ಪರೀಕ್ಷೆಗೆ ಬರುವಾಗ ನರಳಾಡುತ್ತಿದ್ದ ಬಳಿಕ ಸುಮ್ಮನಾಗುತ್ತಿದ್ದ. ಇದ್ದನ್ನು ಗಮನಿಸಿದ ವೈದ್ಯರಿಗೆ ದೊಡ್ಡಯ್ಯನ ಮೇಲೆ ಅನುಮಾನ ಬಂದು ಕೂಡಲೇ ರಕ್ತ ಪರೀಕ್ಷೆ ಮಾಡಿದ್ದಾರೆ. ಆಗ ಆತನ ದೇಹದಲ್ಲಿ ಹನಿಯಷ್ಟು ವಿಷದ ಅಂಶ ಇರಲಿಲ್ಲ ಎನ್ನುವ ವಿಚಾರ ಗೊತ್ತಾಗಿದೆ.
Advertisement
ದೊಡ್ಡಯ್ಯ ವಿಷ ಸೇವಿಸಿದ ಹಾಗೆ ನಾಟಕ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ತಕ್ಷಣ ವೈದ್ಯರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಬಳಿಕ ರಾತ್ರೋರಾತ್ರಿ ಆಸ್ಪತ್ರೆಗೆ ಬಂದ ಪೊಲೀಸರು ದೊಡ್ಡಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗಲೇ ಪ್ರಸಾದಕ್ಕೆ ವಿಷ ಹಾಕಿದ ಅಸಲಿ ಕಹಾನಿಯನ್ನು ದೊಡ್ಡಯ್ಯ ಹೇಳಿದ್ದಾನೆ.
Advertisement
ದೊಡ್ಡಯ್ಯನ ಹೇಳಿಕೆ ನಂತರ ಅಂಬಿಕಾ, ಆಕೆಯ ಪತಿ ಕೊನೆಯದಾಗಿ ಸಾಲೂರು ಮಠದ ಕಿರಿಯ ಸ್ವಾಮೀಜಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv