ರಾಂಚಿ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಗೆ ವೈದ್ಯ ಕಾಂಡೋಮ್ ಬರೆದು ಕೊಟ್ಟ ಘಟನೆಯೊಂದು ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ.
ಅಸ್ರಾಫ್ ಕಾಂಡೋಮ್ ಬರೆದು ಕೊಟ್ಟ ವೈದ್ಯ. ಜುಲೈ 23ರಂದು ಮಹಿಳೆ ಹೊಟ್ಟೆ ನೋವು ಎಂದು ರಾಂಚಿಯ ಪಶ್ಚಿಮ ಸಿಂಗ್‍ಬೂಮ್ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಸ್ರಾಫ್ ಇದೇ ಆಸ್ಪತ್ರೆಯಲ್ಲೇ ಕಾಂಟ್ರ್ಯಾಕ್ಟ್ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ಮಹಿಳೆಗೆ ಪ್ರಿಸ್ಕ್ರಿಪ್ಷನ್ ಪತ್ರದಲ್ಲಿ (ಔಷಧಿ ಚೀಟಿ) ಕಾಂಡೋಮ್ ಬರೆದುಕೊಟ್ಟಿದ್ದಾನೆ.
Advertisement
Advertisement
ಮಹಿಳೆ ವೈದ್ಯರು ಕೊಟ್ಟ ಪ್ರಿಸ್ಕ್ರಿಪ್ಷನ್ ಪತ್ರವನ್ನು ಮೆಡಿಕಲ್ ಶಾಪ್‍ಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಇದ್ದ ವ್ಯಕ್ತಿ ಇದು ಮಾತ್ರೆ ಅಲ್ಲ ಕಾಂಡೋಮ್ ಎಂದು ತಿಳಿಸಿದ್ದಾನೆ. ಈ ವಿಷಯ ತಿಳಿದ ತಕ್ಷಣ ಮಹಿಳೆ ಆಸ್ಪತ್ರೆಯ ಹಿರಿಯ ವೈದ್ಯರಿಗೆ ದೂರು ನೀಡಿದ್ದಾರೆ.
Advertisement
ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕ ಕುನಾಲ್ ಸಾರಂಗಿ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಈಗಾಗಲೇ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ಈ ಬಗ್ಗೆ ತನಿಖೆ ಮಾಡಲು ಒಬ್ಬ ಮನೋವೈದ್ಯರೊಂದಿಗೆ ವೈದಕೀಯ ತಂಡವನ್ನು ರಚಿಸಲಾಗಿದ್ದು, ಭಾನುವಾರದಿಂದ ತನಿಖೆ ಶುರುವಾಗಿದೆ.
Advertisement
ಈ ಬಗ್ಗೆ ಆಸ್ಪತ್ರೆಯ ಉಸ್ತುವಾರಿ ಶಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಮಹಿಳೆ ದೂರಿನ ಆಧಾರದ ಮೇಲೆ ವೈದ್ಯಕೀಯ ತಂಡವನ್ನು ರಚಿಸಿ ತನಿಖೆ ಶುರುವಾಗಿದೆ ಎಂದು ತಿಳಿಸಿದ್ದರು. ತನಿಖೆ ವೇಳೆ ವೈದ್ಯ ತನ್ನ ಮೇಲೆ ಕೇಳಿಬಂದ ಆರೋಪಗಳನ್ನು ನಿರಾಕರಿಸಿದ್ದಾನೆ.