– ದಿಗ್ವಿಜಯ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ
ಬೆಂಗಳೂರು: ದುಡ್ಡಿದ್ರೆ ಆಸ್ಪತ್ರೆ ರೂಲ್ಸ್ ಗಳೇ ಮಂಗಮಾಯ ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಬನಶಂಕರಿಯ ದಿಗ್ವಿಜಯ ಆಸ್ಪತ್ರೆಯಲ್ಲಿಯೊಂದು ಅಮಾನವೀಯ ಘಟನೆ ನಡೆದಿದೆ.
ಸಾಮಾನ್ಯವಾಗಿ ದುಡ್ಡಿನ ಆಸೆಗಾಗಿ ಸತ್ತ ರೋಗಿಯನ್ನು ಐಸಿಯುನಲ್ಲಿಟ್ಟ ಆಸ್ಪತ್ರೆಯವರ ಕಥೆ ಕೇಳಿರ್ತೀವಿ. ಆದ್ರೇ ಇದು ದುಡ್ಡಿನ ಆಮಿಷಕ್ಕೆ ಬಲಿಯಾಗಿ ಐಸಿಯುನಲ್ಲಿ ರೋಗಿ ನರಳಾಡುತ್ತಿರುವಾಗಲೇ ಡಿಸ್ಚಾರ್ಜ್ ಮಾಡಲಾಗಿದೆ.
Advertisement
ಗಂಡನ ಕಿರುಕುಳ ತಾಳಲಾರದೇ ನಿದ್ರೆ ಮಾತ್ರೆ ಸೇವಿಸಿ ಬನಶಂಕರಿಯ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಮಹಿಳೆಯನ್ನು ಬನಶಂಕರಿಯಲ್ಲಿದ್ದ ದಿಗ್ವಿಜಯ ಆಸ್ಪತ್ರೆಗೆ ಗಂಡ ದಾಖಲು ಮಾಡಿಸಿದ್ದಾರೆ. ಆದ್ರೆ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡದಂತೆ ಪತಿ ಒತ್ತಡ ಹೇರಿದ್ರಿಂದ ಆಸ್ಪತ್ರೆಯವರು ಪೊಲೀಸರಿಗೆ ದೌರ್ಜನ್ಯ ಪ್ರಕರಣದ ಬಗ್ಗೆ ಮಾಹಿತಿ ನೀಡಲ್ಲ. ಈ ಬಗ್ಗೆ ಸ್ಥಳಕ್ಕೆ ಬಂದ ಸಂತ್ರಸ್ತೆ ಪರಿಚಯಸ್ತರಾದ ಅನಿತಾ ಹಾಗೂ ಯಶೋಧ ಪೊಲೀಸರಿಗೆ ದೂರು ನೀಡದ ಬಗ್ಗೆ ಪ್ರಶ್ನಿಸಿ ಗಲಾಟೆ ಮಾಡಿದ್ದಾರೆ.
Advertisement
Advertisement
ಆಗ ಪತಿ ಹೇಳಿದಕ್ಕೆ ದೂರು ಕೊಟ್ಟಿಲ್ಲ ಅಂತಾ ಆಸ್ಪತ್ರೆಯವರೇ ಒಪ್ಪಿಕೊಂಡಿದ್ದಲ್ಲದೇ ಫ್ಯಾಮಿಲಿಯವರ ಜೊತೆ ಐಸಿಯುನಲ್ಲಿಯೇ ವಾಗ್ವಾದಕ್ಕಿಳಿಯುತ್ತಾರೆ. ಇನ್ನು ಇಪ್ಪತ್ತನಾಲ್ಕು ಗಂಟೆ ವಿಷ ಕುಡಿದವರನ್ನು ಅಬ್ಸರ್‍ವೇಷನ್‍ನಲ್ಲಿ ಐಸಿಯುನಲ್ಲಿ ಇಡಬೇಕು ಅನ್ನೂ ರೂಲ್ಸ್ ಇದ್ರೂ, ನರಳಾಡುತ್ತಿದ್ದ ಸಂತ್ರಸ್ತೆಯನ್ನು ಯಾರು ಇಲ್ಲದ ವೇಳೆಯಲ್ಲಿ ಡಿಸ್ಚಾರ್ಜ್ ಮಾಡಿ ಗಂಡನ ಜೊತೆ ಹೋಗಮ್ಮ ಅಂತಾ ಕಳಿಸಿದ್ದಾರೆ.
Advertisement
ಇತ್ತ ಮಹಿಳೆ ತನಗೆ ನಡೆಯೋದಕ್ಕೆ ಸಾಧ್ಯವಿಲ್ಲ ಅಂದ್ರೂ ಪತಿ ಬಳಿಯಿಂದ ಹಣ ಪಡೆದು ಯಾರು ಇಲ್ಲದ ವೇಳೆಯಲ್ಲಿ ಆಸ್ಪತ್ರೆಯಿಂದ ಹೊರದಬ್ಬಿದ್ದಾರೆ ಅಂತಾ ಸಂತ್ರಸ್ತೆ ಕಣ್ಣೀರು ಹಾಕಿದ್ದಾರೆ. ಸದ್ಯ ಪತಿ ಮನೆಯಿಂದ ಪಾರಾಗಿ ಬಂದಿರುವ ಮಹಿಳೆ ಖಾಸಗಿ ಆಸ್ಪತ್ರೆಯ ಅಮಾನವೀಯ ಕೃತ್ಯದ ವಿರುದ್ಧ ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv