ಬೆಳ್ಳಿಪರದೆಯಲ್ಲಿ ಸದಾ ನಕ್ಕು ನಗಿಸುತ್ತಿದ್ದ ಜನಾರ್ಧನ್‌ಗೆ ಬ್ಯಾಂಕ್ ಜನಾರ್ಧನ್ (Bank Janardhan) ಎಂಬ ಹೆಸರು ಬರಲು ಕಾರಣವಿದೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ನಟನಿಗೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಸಿಕ್ಕಿದ್ದೆ ರೋಚಕ ಕಥೆ. ಈ ಕುರಿತು ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಬ್ಯಾಂಕ್ ಜನಾರ್ಧನ್ ಸಾವಿನ ಸುದ್ದಿ ಕೇಳಿ ಆಘಾತವಾಯ್ತು: ದೊಡ್ಡಣ್ಣ ಭಾವುಕ
ಜನಾರ್ಧನ್ ಅವರು ತಮ್ಮ ಬಾಲ್ಯವನ್ನು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಕಳೆದಿದ್ದರು. ಬಳಿಕ ಅಲ್ಲಿಯೇ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಶಾಲೆ ಹಾಗೂ ಕಾಲೇಜು ದಿನಗಳಲ್ಲೇ ನಾಟಕದ ಗೀಳು ಅಂಟಿಸಿಕೊಂಡಿದ್ದರು. ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು. ಒಮ್ಮೆ ಅವರ ನಾಟಕ ನೋಡಿ ಇಂಪ್ರೆಸ್ ಆಗಿ ನಟ ಧೀರೇಂದ್ರ ಗೋಪಾಲ್ ಅವರು ಬೆಂಗಳೂರಿಗೆ ಬರುವಂತೆ ಹೇಳಿದ್ದರು. ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ
ಅವರ ಮಾತಿನಂತೆ ಜನಾರ್ಧನ್ ಬೆಂಗಳೂರಿಗೆ ಎಂಟ್ರಿ ಕೊಟ್ಟರು. ಬಳಿಕ ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಅವರಿಗೆ ಬಾಡಿಗಾರ್ಡ್ ಆಗಿ ಪಾತ್ರ ಮಾಡಿದ್ದರು. ಹೀಗೆ ತಮ್ಮ ಹಾಸ್ಯದ ಮೂಲಕ ಫೇಮಸ್ ಆಗುತ್ತಿದ್ದರು. ಆ ವೇಳೆ ಜನಾರ್ಧನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗ ಅನೇಕರು ಜನಾರ್ಧನ್ ಹೆಸರಿನವರು ಇದ್ದರು. ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ಜನಾರ್ಧನ್ ಅವರು ತಮ್ಮ ಹೆಸರಿನ ಮುಂದೆ ಬ್ಯಾಂಕ್ ಅಂತ ಹೆಸರನ್ನು ಸೇರಿಸಿಕೊಂಡರು. ಅಲ್ಲಿಂದ ಅವರು ಬ್ಯಾಂಕ್ ಜನಾರ್ಧನ್ ಅಂತ ಫೇಮಸ್ ಆದರು.
ಅಂದಹಾಗೆ, ಪೋಷಕ ನಟ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಜನಾರ್ಧನ್ ಅವರು ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಛಾಪು ಮೂಡಿಸಿದ್ದಾರೆ.
80, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ್ ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಮಣ್ಯ, ಕೌರವ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ. ಮಾಂಗಲ್ಯ, ರೋಬೋ ಫ್ಯಾಮಿಲಿ, ಪಾಪ ಪಾಂಡು, ಜೋಕಾಲಿ ಸೇರಿದಂತೆ ಸಾಲು ಸಾಲು ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.