ಅಯೋಧ್ಯೆ: ಜಗವೇ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ (Ayodhya) ಶ್ರೀರಾಮನ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಂಡಿದೆ. ನಾಳೆಯಿಂದ (23 ಜನವರಿ 2024) ರಾಮಮಂದಿರದಲ್ಲಿ (Ram Mandir) ಭಕ್ತರು ಬಾಲರಾಮನ ದರ್ಶನ ಪಡೆದು ಕಣ್ತುಂಬಿಕೊಳ್ಳಬಹುದು.
ಬೆಳಗ್ಗೆ 7ರಿಂದ 11.30ರವರೆಗೆ:
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದರ್ಶನ ಪಡೆಯಲು ನೀವು ಬೆಳಗಿನ ಹೊತ್ತು ಹೋಗುವವರಾಗಿದ್ದರೆ ಬೆಳಗ್ಗೆ 7ರಿಂದ ದರ್ಶನ ಭಾಗ್ಯ ಸಿಗಲಿದೆ. 7.00 ಗಂಟೆಗೆ ತೆರೆಯುವ ರಾಮನ ಮಂದಿರ 11.30ಕ್ಕೆ ಬಾಗಿಲು ಮುಚ್ಚಲಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ – Photos ನೋಡಿ..
Advertisement
Advertisement
ಮಧ್ಯಾಹ್ನ 2ರಿಂದ ರಾತ್ರಿ 7.00ರವರೆಗೆ:
ಮಧ್ಯಾಹ್ನ ನಂತರದ ರಾಮಲಲ್ಲಾನ (Ram Lalla) ದರ್ಶನಕ್ಕೂ ಸಮಯ ನಿಗದಿಯಾಗಿದ್ದು ಭಕ್ತರು ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 7.00 ಗಂಟೆಯವರೆಗೆ ಬಾಲರಾಮನ ದರ್ಶನ ಪಡೆಯಬಹುದು. ಜೊತೆಗೆ ಅಕ್ಕಪಕ್ಕದಲ್ಲಿರುವ ಹನುಮಾನ್‌ಗಡಿ, ಸರಯೂ ನದಿ (Sarayu River) ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಇರೋದಿಲ್ಲ, ಗುಂಡಿನ ಸದ್ದು ಕೇಳೋದಿಲ್ಲ: ಯೋಗಿ ಆದಿತ್ಯನಾಥ್
Advertisement
Advertisement
500 ವರ್ಷಗಳ ಕಾತರದ ಕಾಯುವಿಕೆ ಬಳಿಕ ಇಂದು ಭಗವಾನ್ ಶ್ರೀರಾಮ ರಾಮಮಂದಿರಕ್ಕೆ ಬಾಲರಾಮನ ಆಗಮನವಾಗಿದೆ. ಇಂದು ಬೆಳಗ್ಗೆ ನಡೆದ ಶುಭ ಸಮಾರಂಭದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಕಾರ್ಯ ನಡೆಯಿತು. ಈ ಸಮಾರಂಭದಲ್ಲಿ ಯಜಮಾನನಾಗಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ರಾಜಕಾರಣಿಗಳು, ಚಿತ್ರರಂಗ, ಕ್ರೀಡಾಕೂಟ, ಸಾಧು ಸಂತರು, ಸ್ವಾಮೀಜಿಗಳು ಹಾಗೂ ಇನ್ನೂ ಕೆಲವು ವಿವಿಐಪಿ ಗಣ್ಯರಿಗೆ ರಾಮಲಲ್ಲಾ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ದೇಶ ಗುಲಾಮಗಿರಿಯಿಂದ ಮುಕ್ತವಾಗಿದೆ, ಸಾವಿರಾರು ವರ್ಷಗಳ ನಂತರವೂ ಈ ಕ್ಷಣ ನೆನಪಿಸಿಕೊಳ್ತಾರೆ: ಮೋದಿ