ಪ್ರತಿ ಬಾರಿಯೂ ದೋಸೆ, ಇಡ್ಲಿಯೊಂದಿಗೆ ಶೇಂಗಾ, ತೆಂಗಿಕಾಯಿ ಚಟ್ನಿ ತಿಂದು ಬೋರ್ ಆಗಿ ಹೋಗಿದ್ದರೆ, ಈರುಳ್ಳಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ. ಸೂಪರ್ ಸುವಾಸನೆಯುಕ್ತ ಟ್ಯಾಂಗಿ ಈರುಳ್ಳಿ ಚಟ್ನಿಯ ರುಚಿ ಒಮ್ಮೆ ನೋಡಿದರೆ, ಮತ್ತೆ ಮತ್ತೆ ಸವಿಯುವ ಮನಸಾಗುವುದಂತೂ ಖಂಡಿತಾ. ಸಿಂಪಲ್ ಆದ ಈರುಳ್ಳಿ ಚಟ್ನಿ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಎಣ್ಣೆ – 2 ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಒಣ ಕಾಶ್ಮೀರಿ ಕೆಂಪು ಮೆಣಸು – 4
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಹುಣಿಸೇಹಣ್ಣು – ಸಣ್ಣ ತುಂಡು
ಬೆಲ್ಲ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಕಾಲು ಕಪ್
Advertisement
ಒಗ್ಗರಣೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಇಂಗ್ – ಚಿಟಿಕೆ
ಒಣ ಕೆಂಪು ಮೆಣಸಿನಕಾಯಿ – 1
ಕರಿಬೇವಿನ ಎಲೆಗಳು – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಒಣ ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
* ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ, ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
* ಅದನ್ನು ಪಕ್ಕಕ್ಕಿಟ್ಟು, ಸಂಪೂರ್ಣ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ. ಹುಣಿಸೇಹಣ್ಣು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ನೀರು ಹಾಕಿ ನಯವಾಗಿ ಬ್ಲೆಂಡ್ ಮಾಡಿ.
* ಒಗ್ಗರಣೆಗೆ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಸಾಸಿವೆ, ಉದ್ದಿನ ಬೇಳೆ, ಹಿಂಗ್, ಒಣ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ. ಒಗ್ಗರಣೆ ಸಿಡಿಯಲು ಬಿಡಿ.
* ಕೊನೆಯದಾಗಿ ಈರುಳ್ಳಿ ಚಟ್ನಿ ಮೇಲೆ ಒಗ್ಗರಣೆ ಹಾಕಿ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.