ಕರಾವಳಿ ಭಾಗದ ಅತ್ಯಂತ ಪ್ರಸಿದ್ಧ ಖಾದ್ಯಗಳಲ್ಲಿ ಬನ್ಸ್ ಕೂಡಾ ಒಂದು. ಸಿಹಿಯಾದ ಬನ್ಸ್ ಬೆಳಗ್ಗಿನ ಉಪಹಾರಕ್ಕೂ ಸಂಜೆಯ ಚಹಾದ ಸಮಯಕ್ಕೂ ಹೊಂದಿಕೊಳ್ಳುವ ತಿಂಡಿ. ಕರಾವಳಿ ಭಾಗದ ಯಾವ ಸಸ್ಯಾಹಾರಿ ಹೋಟೆಲ್‌ಗೆ ಹೋದರೂ ಸಿಗುವ ಬನ್ಸ್ ಅನ್ನು ಹೆಚ್ಚಿನವರು ಮನೆಯಲ್ಲಿ ಮಾಡಲು ಪ್ರಯತ್ನಿಸುವುದೇ ವಿರಳ. ಬಾಳೆಹಣ್ಣು ಸೇರಿದಂತೆ ಕೆಲವೇ ಸಾಮಾಗ್ರಿಗಳನ್ನು ಬಳಸಿ ಸುಲಭವಾಗಿ ಬನ್ಸ್ ಮಾಡುವ ವಿಧಾನವನ್ನು ನಾವಿಂದು ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು – 2
ಮೈದಾ ಹಿಟ್ಟು – 3.5 ಕಪ್
ಸಕ್ಕರೆ – ಅರ್ಧ ಕಪ್
ಮೊಸರು – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಸೋಡಾ – ಚಿಟಿಕೆ
ಎಣ್ಣೆ – ಡೀಪ್ ಫ್ರೈಗೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಳ್ಳಿ. ಸಿಪ್ಪೆ ತೆಗೆದು, ಗಂಟಿಲ್ಲದಂತೆ ಕಿವುಚಿ.
* ಈಗ ಚೆನ್ನಾಗಿ ಕಿವುಚಿದ ಬಾಳೆಹಣ್ಣಿಗೆ ಸಕ್ಕರೆ, ಅಡುಗೆ ಸೋಡಾ, ಮೊಸರು, ಉಪ್ಪು ಹಾಕಿ ಮಿಕ್ಸ್ ಮಾಡಿ.
* ಸಕ್ಕರೆ ಸಂಪೂರ್ಣ ಕರಗಿದ ಬಳಿಕ ಮೈದಾ ಹಿಟ್ಟನ್ನು ಬಾಳೆ ಹಣ್ಣಿನ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಹಾಕಿ, ಚಪಾತಿ ಹಿಟ್ಟಿನಂತೆ ಕಲಸಿ.
* ಈಗ ಹಿಟ್ಟಿಗೆ 6-8 ಗಂಟೆಗಳ ಕಾಲ ವಿರಾಮ ನೀಡಿ (ರಾತ್ರಿ ಕಲಸಿಟ್ಟರೆ, ಬೆಳಗ್ಗೆಗೆ ತಯಾರಿಸಬಹುದು)
* ಈಗ ಹಿಟ್ಟನ್ನು ನಿಂಬೆ ಹಣ್ಣಿನ ಗಾತ್ರದ ಭಾಗಗಳನ್ನಾಗಿ ಮಾಡಿ, ಉಂಡೆ ಕಟ್ಟಿಕೊಳ್ಳಿ.
* ಪೂರಿ ಮಾಡುವ ಗಾತ್ರಕ್ಕಿಂತ ಸ್ವಲ್ಪ ಸಣ್ಣದಾಗಿ ಹಾಗೂ ಸ್ವಲ್ಪ ದಪ್ಪವಾಗಿ ಉಂಡೆಗಳನ್ನು ಲಟ್ಟಿಸಿಕೊಳ್ಳಿ. ಹಿಟ್ಟು ಅಂಟಿಕೊಳ್ಳದಂತೆ ಮಾಡಲು ಹೆಚ್ಚುವರಿ ಮೈದಾ ಹಿಟ್ಟನು ಲಟ್ಟಿಸುವಾಗ ಬಳಸಬಹುದು.
* ಈಗ ಲಟ್ಟಿಸಿದ ಹಿಟ್ಟನ್ನು ಬಿಸಿ ಎಣ್ಣೆಯಲ್ಲಿ ಬಿಟ್ಟು, ಡೀಪ್ ಫ್ರೈ ಮಾಡಿ.
* ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಈಗ ಕರಾವಳಿ ಭಾಗದ ಫೇಮಸ್ ಬನ್ಸ್ ತಯಾರಾಗಿದ್ದು, ಸಾಂಬರ್‌ನೊಂದಿಗೆ ಸವಿಯಿರಿ.