ಸಿನಿಮಾ ಮನರಂಜನೆಯ ಮೂಲ. ಅದರಲ್ಲಿ ಎರಡು ಮಾತಿಲ್ಲ. ನಿರ್ದೇಶಕ ಕಟ್ಟಿದ ಕಥೆಗೆ ನಿರ್ಮಾಪಕನ ಸಾಥ್ ಸಿಕ್ಕಾಗ ಒಂದೊಳ್ಳೆ ಸಿನಿಮಾ ಆಗುವುದರಲ್ಲಿ ನಿಸ್ಸಂದೇಹವೇ ಇಲ್ಲ. ಅದರಲ್ಲೂ ಒಬ್ಬ ಸದಾಭಿರುಚಿಯ ನಿರ್ಮಾಪಕ ಸಿಕ್ಕರೆಂದರೆ ಆ ಸಿನಿಮಾ ಇನ್ನಷ್ಟು ಕಳೆಗಟ್ಟುತ್ತದೆ. ತೆರೆ ಮೇಲೆ ಸಿನಿಮಾವನ್ನು ತರುವುದರಿಂದ ಹಿಡಿದು, ಅದನ್ನು ಪ್ರೇಕ್ಷಕರಿಗೆ ತಲುಪಿಸುವ ತನಕ ನಿರ್ಮಾಪಕರ ಪಾಲು ಬಹಳ ದೊಡ್ಡದು. ಹಾಗೆ ನಿರ್ಮಾಪಕನಿಗೂ ಸಿನಿಮಾದಿಂದ ಒಂದಿಷ್ಟು ಜೇಬು ತುಂಬಿದರೆ ಇನ್ನೊಂದಿಷ್ಟು ಸಿನಿಮಾ ಮಾಡುವುದಕ್ಕೆ ಹುಮ್ಮಸ್ಸು ಬರುತ್ತದೆ. ಸದ್ಯ ಸ್ಯಾಂಡಲ್‍ವುಡ್ ಅಂಗಳಕ್ಕೆ ಒಂದಿಷ್ಟು ಪ್ಯಾಶನೇಟ್ ಪ್ರೊಡ್ಯೂಸರ್‌ಗಳು ದಕ್ಕಿದ್ದಾರೆ. ಉತ್ತಮ ಸಿನಿಮಾ ಕಟ್ಟಿ ಕೊಡುವಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ. ಅವರಲ್ಲಿ ನಾಗೇಶ್ ಕೋಗಿಲು ಕೂಡ ಒಬ್ಬರು.
Advertisement
ಮೂಲತಃ ಬೆಂಗಳೂರಿನವರಾದ ನಾಗೇಶ್ ಯಲಹಂಕದ ಕೋಗಿಲು ನವರು. ವೃತ್ತಿಯಲ್ಲಿ ಬ್ಯುಸಿನೆಸ್ ಮೆನ್. ಇವರ ಸಿನಿಮಾ ಪ್ರೀತಿ ಇಂದು ನೆನ್ನೆಯದಲ್ಲ. ಬಾಲ್ಯದ ದಿನಗಳಿಂದಲೂ ಸಿನಿಮಾ, ನಟನೆಯಲ್ಲಿ ಅಪಾರ ಆಸಕ್ತಿ. ಆ ಕನಸಿನ ಬೆನ್ನತ್ತಿ 2006ರಲ್ಲಿ ಗಾಂಧೀನಗರಕ್ಕೆ ಬಂದು ಅವಕಾಶಗಳು ಸಿಗದೆ, ನಿರಾಸೆಯಲ್ಲಿ ಹೋದವರು. ಆದರೆ ಸಿನಿಮಾ ರಂಗಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ತುಡಿತ ಮಾತ್ರ ಕಡಿಮೆ ಆಗಿರಲಿಲ್ಲ. ಕಲಾವಿದನಾಗದಿದ್ದರೇನಂತೆ ಉತ್ತಮ ಸಿನಿಮಾ ನಿರ್ಮಾಣ ಮಾಡಿ ಕಲಾ ದೇವಿಯ ಸೇವೆ ಮಾಡಿದರಾಯಿತು ಎಂದು ನಿರ್ಮಾಪಕರಾದರು. ಆಗ ನಿರ್ಮಾಣ ಮಾಡಿದ ಚಿತ್ರವೇ ‘ಹುಲಿರಾಯ’. ಇದನ್ನೂ ಓದಿ: ‘ಟಕ್ಕರ್’ ನಲ್ಲಿ ಡಾಕ್ಟರ್ ಆದ ನಟಿ ರಂಜನಿ ರಾಘವನ್
Advertisement
Advertisement
2017ರಲ್ಲಿ ತೆರೆಕಂಡ ‘ಹುಲಿರಾಯ’ ಸಿನಿಮಾ ಬಗ್ಗೆ ಗೊತ್ತಿರಬಹುದು. ಈ ಚಿತ್ರದ ಮೂಲಕ ಚಂದನವನಕ್ಕೆ ನಿರ್ಮಾಪಕರಾಗಿ ಕಾಲಿಟ್ಟವರು ನಾಗೇಶ್ ಕೋಗಿಲು. ಚಿತ್ರ ಹೇಳಿಕೊಳ್ಳುವಂತ ಯಶಸ್ಸು ಕಾಣದಿದ್ದರೂ ನಿರ್ಮಾಪಕರ ಸಿನಿಮಾ ಪ್ರೀತಿ, ಕಟೆಂಟ್ ಆಯ್ಕೆಯಲ್ಲಿ ಅವರಿಗಿದ್ದ ಜ್ಞಾನ ಎಲ್ಲವೂ ಪ್ರಶಂಸೆಗೆ ಪಾತ್ರವಾಗಿತ್ತು. ತದನಂತರ ಅಳೆದು ತೂಗಿ ಮತ್ತೊಂದು ಚಿತ್ರವನ್ನು ಆಯ್ಕೆ ಮಾಡಿಕೊಂಡು ನಿರ್ಮಾಣ ಮಾಡಿದ್ದಾರೆ. ಅದುವೇ ರಘು ಶಾಸ್ತ್ರಿ ನಿರ್ದೇಶನದ ‘ಟಕ್ಕರ್’. ಇದನ್ನೂ ಓದಿ: ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ
Advertisement
ಸೈಬರ್ ಕ್ರೈಂ ಕಥಾಹಂದರದ ಚಿತ್ರದಲ್ಲಿ ಮನೋಜ್ ಕುಮಾರ್, ರಂಜನಿ ರಾಘವನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ ವಾರ ಅಂದರೆ 6ನೇ ತಾರೀಖು ಸಿನಿಮಾ ಬಿಡುಗಡೆಯಾಗುತ್ತಿದೆ. ಸೈಬರ್ ಕ್ರೈಂ ಕಥಾಹಂದರದ ಈ ಚಿತ್ರ ಮನರಂಜನೆ ಜೊತೆಗೆ ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರಿಕೆ ಮೂಡಿಸುವ, ಹೆಣ್ಣು ಮಕ್ಕಳ ಮೇಲು ಬೆಳಕು ಚೆಲ್ಲುವ ಕಟೆಂಟ್ ಒಳಗೊಂಡಿದೆ. ಸಿನಿಮಾದ ಕಥೆ ಪ್ರಸ್ತುತ ಎನಿಸಿದ್ದರಿಂದ, ನಾಗೇಶ್ ಕೋಗಿಲು ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಒಪ್ಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ತಮ್ಮದೇ ಆದ ಎಸ್‍ಎಲ್‍ಎನ್ ಕ್ರಿಯೇಷನ್ಸ್ ನಡಿ ತೆರೆ ಮೇಲೆ ತಂದಿದ್ದಾರೆ. ಚಿತ್ರದ ಕಟೆಂಟ್ ಮೇಲೆ ನಂಬಿಕೆ ಇಟ್ಟಿರುವ ನಿರ್ಮಾಪಕರು ಪ್ರೇಕ್ಷಕರು ಒಪ್ಪಿ, ಅಪ್ಪಿ ಜೈಕಾರ ಹಾಕಿದರೆ ಮತ್ತೊಂದಿಷ್ಟು ಉತ್ತಮ ಸಿನಿಮಾ ಮಾಡುವ ಹಂಬಲವಿದೆ ಎನ್ನುತ್ತಾರೆ.