ಬಿಗ್‌ಬಾಸ್‌ಗೆ ಹೋಗುವ ಪ್ರತಿಯೊಬ್ಬ ಸ್ಪರ್ಧಿಯೂ ಬಟ್ಟೆ ಹಾಗೂ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಲು ಸಾಕಷ್ಟು ಖರ್ಚು ಮಾಡುತ್ತಾರೆ. ಅದೇ ರೀತಿ ಬಿಗ್ ಬಾಸ್ ಸೀಸನ್ 12ರ (Bigg Boss 12) 4ನೇ ರನ್ನರ್ ಅಪ್ ಕಾವ್ಯ ಶೈವ (Kavya Shaiva) ಅವರು ಕೂಡ ಒಂದಿಷ್ಟು ಶಾಪಿಂಗ್ ಮಾಡಿದ್ದು, ಎಷ್ಟು ಖರ್ಚು ಮಾಡಿದ್ದಾರೆ ಎಂಬ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಹಂಚಿಕೊಂಡಿದ್ದಾರೆ.
‘ಪಬ್ಲಿಕ್ ಟಿವಿ’ಯ ಸಂದರ್ಶನದಲ್ಲಿ ಮಾತನಾಡಿದ ಕಾವ್ಯ, ಬಿಗ್‌ಬಾಸ್‌ಗೆ ಹೋಗಲು ತುಂಬಾ ಖರ್ಚು ಮಾಡಿಲ್ಲ. ಕೆಲವೊಂದಿಷ್ಟು ಬಟ್ಟೆಗಳನ್ನು ತೆಗೆದುಕೊಂಡಿದ್ದೇನೆ. ಎಷ್ಟು ಖರ್ಚು ಮಾಡಿದ್ದೇನೆ ಎಂದು ಹೇಳಲು ಇಷ್ಟಪಡಲ್ಲ ಎಂದು ಹೇಳಿದ್ದಾರೆ.
ವೀಕೆಂಡ್ ಕಾರ್ಯಕ್ರಮಕ್ಕೆ ಅವರೇ ಬಟ್ಟೆಗಳನ್ನು ಕಳುಹಿಸಿಕೊಡುತ್ತಿದ್ದರು. ಅದು ಬಿಟ್ಟರೆ ಪ್ರತಿನಿತ್ಯ ಹಾಕುವ ಬಟ್ಟೆಗಳಿಗೆ ಖರ್ಚು ಮಾಡಿದ್ದೀನಿ. ನಾನು ಜಾಸ್ತಿ ಸೀರೆ ಹಾಕಲು ಇಷ್ಟಪಡುತ್ತೇನೆ. ಬಿಗ್‌ಬಾಸ್ ಮನೆಯಲ್ಲಿ ನಮ್ಮ ಮನೆಯಲ್ಲಿ ಇರೋ ಹಾಗೇ ಇರೋಣ ಅಂತ ಕುರ್ತಾ ಟಾಪ್‌ಗಳನ್ನು ತೆಗೆದುಕೊಂಡು ಹೋಗಿದ್ದೆ. ಮನೆಯಿಂದ ಹೆಚ್ಚಾಗಿ ಸೀರೆಗಳನ್ನೇ ಕಳುಹಿಸಿಕೊಡುತ್ತಿದ್ದರು. ಆದ್ದರಿಂದ ಹೆಚ್ಚು ಸೀರೆಗಳನ್ನೇ ಹಾಕುತ್ತಿದ್ದೆ ಎಂದಿದ್ದಾರೆ ಕಾವ್ಯ.
ಬಿಗ್‌ಬಾಸ್ ಸೀಸನ್ 12 ಯಶಸ್ವಿಯಾಗಿ ಮುಗಿದಿದ್ದು, ಗಿಲ್ಲಿ ನಟ ವಿನ್ನರ್ ಆಗಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಗೆದ್ದ ಗಿಲ್ಲಿಯನ್ನು ನಟಿ ಕಾವ್ಯ ಶೈವ ಅಭಿನಂದಿಸಿದ್ದಾರೆ. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವ ಹಾಗೇ ಆಗ್ಲಿ ಎಂದು ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ ಅವರು, ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ. ಹೇ ಗಿಲ್ಲಿ ಅಭಿನಂದನೆಗಳು ಕಣೋ. ಝೀರೋದಿಂದ ಹೀರೋ ಆಗಿದ್ಯಾ. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವ ಹಾಗೇ ಆಗ್ಲಿ. ತುಂಬಾ ತುಂಬ ಒಳ್ಳೇದಾಗ್ಲಿ ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

