ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಹೈವೋಲ್ಟೇಜ್ ಸಿನಿಮಾ `ಪುಷ್ಪಾ-2′ (Pushpa-2) ಡಿಜಿಟಲ್ ಮಾರ್ಕೆಟ್‌ನಲ್ಲಿ ಹಲ್‌ಚಲ್ ಮಾಡ್ತಿದೆ. ಈ ಸಿನಿಮಾದ ಡಿಜಿಟಲ್ ಹಕ್ಕು (Digital Rights) ಮಾರಾಟ ಭರ್ತಿ 270 ಕೋಟಿಗೆ ಮಾರಾಟವಾಗಿದ್ದು, ಸಿನಿಮಾ ಬಜಾರ್‌ನಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದೆ. ಸಿನಿಮಾ ತೆರೆಗೂ ಮುನ್ನವೇ ಇಷ್ಟು ದೊಡ್ಡ ಮೊತ್ತಕ್ಕೆ ಡಿಜಿಟಲ್ ಹಕ್ಕು ಮಾರಾಟವಾಗಿರೋದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಸುಕುಮಾರ್ ನಿರ್ದೇಶನದಲ್ಲಿ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್, ಸುನೀಲ್ ಸೇರಿದಂತೆ ಅತೀದೊಡ್ಡ ತಾರಾಗಣದಿಂದ ಪಾರ್ಟ್-1 ಸಿನಿಮಾ ಭಾರೀ ಸೌಂಡ್ ಮಾಡಿತ್ತು. ಇದೀಗ ಪಾರ್ಟ್-2 ಸಿನಿಮಾ ಕೂಡಾ ಡಿಫರೆಂಟ್ ಮೇಕಿಂಗ್, ವಿಭಿನ್ನ ಸಾಂಗ್ ಹಾಗೂ ನಾಯಕನಟ ಅಲ್ಲು ಅರ್ಜುನ್ ಗಂಗಮ್ಮನ ಪಾತ್ರ ಭಕ್ತಗಣ ಶಿಳ್ಳೆ ಹೊಡೆದು ಕೇಕೆ ಹಾಕುವಂತೆ ಮಾಡಿದೆ. ಸ್ಯಾಂಪಲ್ಸ್ ಇಂದಲೇ ಫ್ಯಾನ್ಸ್ ಕ್ರೇಜ್ ಹೆಚ್ಚಿಸಿರುವ ಸಿನಿಮಾ ಮಾರ್ಕೆಟ್‌ನಲ್ಲೂ ಟ್ರೆಂಡ್ ಸೃಷ್ಟಿಸಿದೆ. ಇದನ್ನೂ ಓದಿ: ದರ್ಶನ್‌ಗೆ ಬೆನ್ನುನೋವು – ಜೈಲು ವೈದ್ಯರಿಂದ ನಟನ ಆರೋಗ್ಯ ತಪಾಸಣೆ
ಅಲ್ಲು ಅರ್ಜುನ್ ಕರಿಯರ್‌ನಲ್ಲೇ ತುಂಬಾನೇ ವಿಭಿನ್ನವಾದ ಸಿನಿಮಾ ಪುಷ್ಪ ಆಗಿದ್ದು, ಸದ್ಯ ಡಿಜಿಟಲ್ ರೈಟ್ಸ್ ಸೌಂಡ್ ಮಾಡುತ್ತಿದೆ. ಅಂದುಕೊಂಡಂತೆ ಆಗಿದ್ರೆ, ಪುಷ್ಪ-2 ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಿದೆ ಚಿತ್ರತಂಡ. ಇದೇ ವರ್ಷ ಡಿಸೆಂಬರ್ 6ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ ಪುಷ್ಪ-2 ಚಿತ್ರ. ಇದನ್ನೂ ಓದಿ: ದರ್ಶನ್ ವಿಚಾರದಲ್ಲಿ ನಾನು ಯಾವುದೇ ಪ್ರಭಾವ ಬೀರಿಲ್ಲ: ಜಮೀರ್
ಸದ್ಯ ಟೀಸರ್ ಹಾಗೂ ಹಾಡುಗಳಿಂದ ಗಮನ ಸೆಳೆದ ಪುಷ್ಪ, ಇದೀಗ ಡಿಜಿಟಲ್ ಹಕ್ಕು ಮಾರಾಟದಿಂದ ಮತ್ತಷ್ಟು ಮಗದಷ್ಟು ಸುದ್ದಿಗೆ ಕಾರಣವಾಗಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಬರೋಬ್ಬರಿ 270 ಕೋಟಿಗೆ ಪುಷ್ಪ-2 ಸಿನಿಮಾದ ಡಿಜಿಟಲ್ ಹಕ್ಕು ಖರೀದಿಸಿದೆ. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಜೂ.ಎನ್‌ಟಿಆರ್