ಮಾನವ ಇತಿಹಾಸದಲ್ಲಿ ನಡೆದ ಡೆಡ್ಲಿ ವಾರ್‌ಗಳ ಬಗ್ಗೆ ನಿಮಗೆ ಗೊತ್ತಾ?

Public TV
4 Min Read
deadly wars

ಪ್ರಪಂಚದ ಇತಿಹಾಸದುದ್ದಕ್ಕೂ, ಲೆಕ್ಕವಿಲ್ಲದಷ್ಟು ಯುದ್ಧಗಳು (War) ನಡೆದಿವೆ. ಈ ಯುದ್ಧಗಳ ಪೈಕಿ ಬೆರಳೆಣಿಕೆಯಷ್ಟು ಯುದ್ಧಗಳ ಬಗ್ಗೆ ಮಾತ್ರ ಪಾಠ ಪುಸ್ತಗಳಲ್ಲಿ ಉಲ್ಲೇಖವಾಗಿದೆ. ಆದರೇ ಮಾನವ ಇತಿಹಾಸದಲ್ಲಿ ಹಲವಾರು ಡೆಡ್ಲಿವಾರ್‌ಗಳು ನಡೆದಿದ್ದು, ಕೆಲವೇ ಕೆಲವು ಯುದ್ಧಗಳು ಮಾತ್ರ ಇತಿಹಾಸ ಪಾಠ ಪುಸ್ತಕವನ್ನು ಸೇರಿದೆ. ಯುದ್ಧವು ರಾಷ್ಟ್ರದ ಅಭಿವೃದ್ಧಿಯನ್ನು ಕುಂಠಿತಗೊಳಿಸುವುದಲ್ಲದೇ ಸಾಮಾಜಿಕ ಒಗ್ಗಟ್ಟನ್ನು ಬೇರು ಸಮೇತ ಕಿತ್ತುಹಾಕುತ್ತದೆ. ಮಾನವ ಜನಾಂಗಕ್ಕೆ ಅರಿಯದ ಕೆಲವು ಡೆಡ್ಲಿ ವಾರ್‌ಗಳ ಕುರಿತು ಹಲವು ಅಂಶಗಳನ್ನು ಈ ಮೂಲಕ ತಿಳಿದುಕೊಳ್ಳೋಣ.

1) ಎರಡನೇ ಕಾಂಗೋ ಯುದ್ಧ (2nd Congo War) :
ಎರಡನೇ ಕಾಂಗೋ ಯುದ್ಧ (998-2003) ಆಫ್ರಿಕನ್ ಇತಿಹಾಸದಲ್ಲಿ ನಡೆದ ಅತ್ಯಂತ ಮಾರಕ ಯುದ್ಧಗಳಲ್ಲಿ ಒಂದಾಗಿದೆ. 1998ರಲ್ಲಿ, ಕಿಗಾಲಿ ಮತ್ತು ಕಿನ್ಶಾಸಾ ನಡುವಿನ ಸಂಬಂಧಗಳು ಹದಗೆಟ್ಟ ನಂತರ ಎರಡನೇ ಕಾಂಗೋ ಯುದ್ಧವು ಪ್ರಾರಂಭವಾಯಿತು. ಈ ಯುದ್ಧವು 5 ವರ್ಷಗಳ ಅವಧಿಯಲ್ಲಿ ನಡೆದಿದ್ದು, ಸುಮಾರು 5.4 ಮಿಲಿಯನ್ ಜನರು ಇದರಲ್ಲಿ ಅಸುನೀಗಿದರು. ಅಲ್ಲದೇ ಈ ಸಮಯದಲ್ಲಿ ಕ್ಷಾಮ ಮತ್ತು ರೋಗಗಳು ಜನರನ್ನು ಭಾದಿಸಿದ್ದರಿಂದ ಹಲವರು ಮೃತಪಟ್ಟರು. ಎರಡನೇ ವಿಶ್ವಯುದ್ಧದ ಬಳಿಕ ನಡೆದ ಅತ್ಯಂತ ಮಾರಕ ಯುದ್ಧ ಇದಾಗಿದೆ.

second congo war

2) ಮೂವತ್ತು ವರ್ಷಗಳ ಯುದ್ಧ (Thirty Years War):
ಮೂವತ್ತು ವರ್ಷಗಳ ಯುದ್ಧ 17ನೇ ಶತಮಾನದ ಧಾರ್ಮಿಕ ಯುದ್ಧವಾಗಿದ್ದು, ಹೆಸರೇ ಸೂಚಿಸುವಂತೆ ಈ ಯುದ್ಧ ಮೂವತ್ತು ವರ್ಷಗಳವರೆಗೆ ನಡೆಯಿತು. 1618ರಿಂದ 1648ರ ನಡುವಿನ ದೀರ್ಘ ಯುದ್ಧ ಇದಾಗಿದೆ. ಮಧ್ಯ ಯುರೋಪಿನಲ್ಲಿನ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ರಾಜ್ಯಗಳ ನಡುವೆ ಯುದ್ಧ ನಡೆದಿದ್ದು, ಈ ಯುದ್ಧವು 8 ಮಿಲಿಯನ್ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಗಳ ಸಾವಿಗೆ ಕಾರಣವಾಗಿದೆ.

30 years war

3) ಚೀನೀ ಅಂತರ್ಯುದ್ಧ (Chinese Civil War):
ಈ ಯುದ್ಧವು 1927ರ ಆಗಸ್ಟ್‌ನಲ್ಲಿ ನಡೆದಿದ್ದು, ಕುಮಿಂಟಾಂಗ್ ಮತ್ತು ಚೀನಾದ ಕ್ಯಮುನಿಸ್ಟ್ ಪಕ್ಷದ ನಡುವೆ ನಡೆಯಿತು. ಈ ಎರಡೂ ಪಕ್ಷಗಳು ನಡೆಸಿದ ಹತ್ಯಾಕಾಂಡಗಳು ಮತ್ತು ಸಾಮೂಹಿಕ ದೌರ್ಜನ್ಯಗಳು 1950ರ ವೇಳೆಗೆ 8 ಮಿಲಿಯನ್‌ಗಿಂತಲೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿತು.

chinese civil war

4) ರಷ್ಯಾದ ಅಂತರ್ಯುದ್ಧ (Russian Civil War):
ರಷ್ಯಾದ ಅಂತರ್ಯುದ್ಧದಲ್ಲಿ 9 ದಶಲಕ್ಷಕ್ಕೂ ಹೆಚ್ಚು ಜನರು ಅಸುನೀಗಿದರು. ಈ ಯುದ್ಧವು 1917ರಿಂದ 1922ರ ಅವಧಿಯಲ್ಲಿ ನಡೆದಿದ್ದು, ಬೊಲ್ಶೆವಿಕ್‌ಗಳ ವಿರುದ್ಧವಾಗಿ ಇನ್ನೊಂದು ಬಣ ರಚನೆಯಾಯಿತು. ಈ ಗುಂಪಿನಲ್ಲಿ ರಾಜಪ್ರಭುತ್ವವಾದಿಗಳು, ಮಿಲಿಟರಿವಾದಿಗಳು ಮತ್ತು ಅಲ್ಪಾವಧಿಗೆ ವಿದೇಶಿ ರಾಷ್ಟ್ರಗಳು ಕೈಗೂಡಿಸಿದ್ದವು. ಬೊಲ್ಶೆವಿಕ್ ಜನರನ್ನು ರೆಡ್ಸ್ ಎಂದು ಕರೆದರೆ ವಿರೋಧ ಗುಂಪನ್ನು ವೈಟ್ಸ್ ಎಂದು ಕರೆಯಲಾಗುತ್ತಿತ್ತು.

russia civil war

5) ತೈಪಿಂಗ್ ದಂಗೆ (Taiping Rebellion War):
ತೈಪಿಂಗ್ ದಂಗೆಯು ಚೀನಾದಲ್ಲಿ ನಡೆದ ಅತ್ಯಂತ ಪ್ರಮುಖ ದಂಗೆಯಾಗಿದೆ. ಈ ದಂಗೆಯು 1850ರಿಂದ 1864ರ ಅವಧಿಯಲ್ಲಿ ನಡೆದಿದೆ. ಕ್ವಿಂಗ್ ರಾಜವಂಶ ಮತ್ತು ತೈಪಿಂಗ್ ಹೆವೆನ್ಲಿ ಕಿಂಗ್‌ಡಮ್ ನಡುವೆ ಈ ಯುದ್ಧ ನಡೆದಿದ್ದು, 17 ಪ್ರಾಂತ್ಯಗಳು ಈ ದಂಗೆಯಿಂದ ಧ್ವಂಸಗೊಂಡವು. ಈ ದಂಗೆಯಿಂದ ಸುಮಾರು 20-30 ಮಿಲಿಯನ್ ಜನರು ನಿಧನರಾಗಿದ್ದಾರೆ.

taiping rebellion war

6) ಎರಡನೇ ಮಹಾಯುದ್ಧ (2nd World War):
1939ರಿಂದ 1945ರವರೆಗೆ ಎರಡನೇ ವಿಶ್ವಯುದ್ಧ ನಡೆದಿದ್ದು, ಸುಮಾರು 70 ಮಿಲಿಯನ್ ಜನರು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದ ಏಕೈಕ ಯುದ್ಧ ಇದಾಗಿದ್ದು, ಹಿಟ್ಲರ್‌ನ ಹತ್ಯೆಯ ಬಳಿಕ ಎರಡನೇ ವಿಶ್ವಯುದ್ಧವು ವಿಶ್ವದ ರಾಜಕೀಯವನ್ನು ಶಾಶ್ವತವಾಗಿ ಬದಲಾಯಿಸಿತು.

second world war

7) ಮಂಗೋಲ್ ವಿಜಯಗಳು (Mangol Conquests):
ಮಂಗೋಲ್ ವಿಜಯಗಳು ಯುರೋಪಿನಲ್ಲಿ ನಡೆದಿದೆ. 13ನೇ ಶತಮಾನದ ಆರಂಭದಲ್ಲಿ ಮಂಗೋಲರು ಭೂಮಿಯ ಸುಮಾರು 20%ನಷ್ಟು ಜಾಗವನ್ನು ವಶಪಡಿಸಿಕೊಂಡರು. ಅವರ ಸಾಮ್ರಾಜ್ಯವು ಏಷ್ಯಾ ಮತ್ತು ಪೂರ್ವ ಯುರೋಪಿನಲ್ಲಿ ಹರಡಿತಲ್ಲದೇ, ಈ ಸಮಯದಲ್ಲಿ ನಡೆದ ಯುದ್ಧಗಳಲ್ಲಿ ಸುಮಾರು 60ರಿಂದ 70 ಮಿಲಿಯನ್ ಜನರು ಮೃತಪಟ್ಟರು. ಮಂಗೋಲಿಯನ್ ಸೇನೆಯ ಇತಿಹಾಸದ ದಂತಕಥೆಯ ಪ್ರಕಾರ, ಮಂಗೋಲಿಯನ್‌ಗಳಿಂದ ಕೊಲ್ಲಲ್ಪಡುವುದನ್ನು ತಪ್ಪಿಸುವ ಸಲುವಾಗಿ ಸುಮಾರು 1,00,000 ಚೀನೀ ಜನರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದುಬಂದಿದೆ.

mangol conquest

8) ಮೊದಲನೇ ಮಹಾಯುದ್ಧ (First World War):
ಇತಿಹಾಸದಲ್ಲಿ ನಡೆದ ಎರಡು ಜಾಗತಿಕ ಯುದ್ಧಗಳಲ್ಲಿ ಇದು ಮೊದಲನೇ ಯುದ್ಧ. ಮೊದಲನೇ ಮಹಾಯುದ್ಧವು 1914ರಿಂದ 1918ರವರೆಗೆ ನಡೆಯಿತು. ಈ ಯುದ್ಧದಲ್ಲಿ 17 ಮಿಲಿಯನ್ ಜನರು ಸಾವನ್ನಪ್ಪಿದ್ದು, ಜರ್ಮನಿ, ಇಟಲಿ, ಆಸ್ಟಿçಯಾ ಮತ್ತು ಹಂಗೇರಿಯ ಮೇಲೆ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ವಿಜಯ ಸಾಧಿಸಲು ಕಾರಣವಾಯಿತು. ಮೊದಲನೇ ಮಹಾಯುದ್ಧದ ಬಳಿಕ ಲೀಗ್ ಆಫ್ ನೇಷನ್ಸ್ ರಚಿಸಲಾಯಿತು. ಆದರೆ ವಿಶ್ವಶಾಂತಿಯನ್ನು ಕಾಪಡಿಕೊಳ್ಳುವಲ್ಲಿ ಇದು ವಿಫಲವಾದ್ದರಿಂದ ಎರಡನೇ ಮಹಾಯುದ್ಧಕ್ಕೆ ಕಾರಣವಾಯಿತು.

first world war

ಇಂತಹ ರಕ್ತಸಿಕ್ತ ಯುದ್ಧಗಳು ಇನ್ನೂ ಅನೇಕ ಕಡೆಗಳಲ್ಲಿ ನಡೆದಿದ್ದು, ಇತಿಹಾಸ ಪಠ್ಯ ಪುಸ್ತಕಗಳಲ್ಲಿ ಇದರ ಉಲ್ಲೇಖವಿಲ್ಲ. ಈ ಯುದ್ಧಗಳಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು ಒಂದು ಕಡೆಯಾದರೇ ಇನ್ನೊಂದೆಡೆ ಅನೇಕ ರಾಜರು ಹಾಗೂ ರಾಜವಂಶಗಳು ಯುದ್ಧಗಳಲ್ಲಿ ಗೆದ್ದು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಚರಿತ್ರೆ ಸೃಷ್ಟಿಸಿ ಇತಿಹಾಸದ ಪುಟವನ್ನು ಸೇರಿದ್ದಾರೆ.

Web Stories

Share This Article