ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಹೋಗಬೇಕೆಂದರೆ ವಿಜಯದಶಮಿಯ (Vijayadashami) ಸಂದರ್ಭದಲ್ಲಿ ಹೋಗಬೇಕು. ಏಕೆಂದರೆ ಈ ಸಮಯದಲ್ಲಿ ಕೋಲ್ಕತ್ತಾದ (Kolkata) ಸುತ್ತ ಜೀವಂತಿಕೆಯ ಸಂಭ್ರಮ ಕಳೆಗಟ್ಟಿರುತ್ತದೆ. ಸಂಪೂರ್ಣ ಜನಸ್ತೋಮ ಕೇವಲ ಜಗಜ್ಜಜನಿಯ ಪೂಜೆಯ ಸಂಭ್ರಮದಲ್ಲಿರುತ್ತದೆ. ಅದುವೇ ದುರ್ಗಾ ಪೂಜೆ, ಭವತಾರಿಣಿಗೆ ಅವರು ಅರ್ಪಿಸುವ ವಂದನೆ.
ಹೌದು. ದೇಶದಲ್ಲಿ ಎಲ್ಲಕ್ಕಿಂತ ಸಂಭ್ರಮದ ದಸರೆ ಉತ್ಸವ ನಡೆಯುವುದು ಕೋಲ್ಕತ್ತಾದಲ್ಲಿ. ದುರ್ಗಾಪೂಜೆಗೆ 4 ತಿಂಗಳ ಹಿಂದೆಯೇ ತಯಾರಿ ಆರಂಭವಾಗಿರುತ್ತದೆ. ಕುಮಾರ್ತುಲಿಯಿಂದ ಆರಂಭಿಸಿ ಡಮ್ ಡಮ್ ಪಾರ್ಕ್ ತನಕ ದಸರೆಯ ವೇಳೆ ಕೊಲ್ಕೊತ್ತಾದ ಬೀದಿಬೀದಿಗಳಲ್ಲಿ ಸರ್ಬೋಜನಿನ್ (ಸಾರ್ವಜನಿಕ) ದುರ್ಗಾಪೂಜೆಯ ಪೆಂಡಾಲ್‌ಗಳು ತಲೆಯೆತ್ತುತ್ತವೆ. ಒಂದನ್ನೊಂದು ಮೀರಿಸುವ ವೈಭವ, ಜಾನಪದ ನೃತ್ಯಸಂಗೀತ, ಸಾಂಪ್ರದಾಯಿಕ ಆಚರಣೆಗಳಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನಗಳ ತನಕ ಎಲ್ಲವನ್ನೂ ಸೇರಿಸಿಕೊಂಡು ವಿಜೃಂಭಿಸುವ ಮಹೋತ್ಸವ ಇದಾಗಿರುತ್ತದೆ.
ದೇವಿಯ ಭವ್ಯ ಅಲಂಕಾರ, ನಿತ್ಯ ಪೂಜೆಯ ಸಂಭ್ರಮ, ಮಾತ್ರವೇ ಅಲ್ಲ, ಪೆಂಡಾಲ್‌ಗಳಲ್ಲಿ ನಡೆಯುವ ವಿಭಿನ್ನ ಸ್ಪರ್ಧೆಗಳು, ಸಾಂಪ್ರದಾಯಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ. ಇಲ್ಲಿ ನೃತ್ಯ ಸಂಗೀತಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಗೊಂಬೆಗಳ ಪ್ರದರ್ಶನವಿರುತ್ತದೆ. ಚಿತ್ರಕಲಾ ಸ್ಪರ್ಧೆಗಳೊಂದಿಗೆ ವಿನೂತನ ಪ್ರಯೋಗಗಳು ನಡೆಯುತ್ತವೆ. ಹೀಗೆ ದುರ್ಗಾ ಪೂಜೆ ಸಮಯದಲ್ಲಿ ಕೋಲ್ಕತ್ತಾದ ಸುತ್ತ 3 ಸಾವಿರಕ್ಕೂ ಅಧಿಕ ಪೆಂಡಾಲ್‌ಗಳಲ್ಲಿ ದುರ್ಗಾಪೂಜೆಯ ಸಂಭ್ರಮ ನಡೆಯುತ್ತದೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧ ಪೆಂಡಾಲ್‌ಗಳ ಬಗ್ಗೆ ತಿಳಿಯಬಹುದು.
ಇಲ್ಲಿನ ಪ್ರಸಿದ್ಧ ಪೆಂಡಾಲ್‌ಗಳ ಪೈಕಿ ಮಹಮ್ಮದ್ ಅಲಿ ಪಾರ್ಕ್ ಕೊಲ್ಕತ್ತಾದ ಸುಪ್ರಸಿದ್ಧ ಉದ್ಯಾನಗಳಲ್ಲಿ ಒಂದಾಗಿದೆ. ಹೀಗಾಗಿ ಇಲ್ಲಿ ಯಾವಾಗಲೂ ಜನಸಂದಣಿ ಇರುತ್ತದೆ. ದುರ್ಗಾಪೂಜೆಯ ವೇಳೆ ಇಲ್ಲಿ ಕಾಲಿಡಲೂ ಕಷ್ಟವಾಗುತ್ತದೆ. ಇದನ್ನೂ ಓದಿ: ನವರಾತ್ರಿ ವಿಶೇಷ – 3 | ಕುಮಾರಿ ಪೂಜಾ, ಭವ್ಯಸುಂದರ ದೀಪಾಲಂಕಾರ – ಕಾಲೇಜು ಚೌಕ್ ದುರ್ಗಾ ಪೆಂಡಾಲ್
ಮಹಮ್ಮದ್ ಅಲಿ ಪಾರ್ಕ್‌ನ (Mohammad Ali Park Durga Pandal)ದುರ್ಗಾಪೂಜೆ 1960ರಿಂದ ಸಾಂಪ್ರದಾಯಿಕ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಪೂಜೆಯನ್ನು ಬಿಟ್ಟರೆ ಉಳಿದ ಅಲಂಕಾರ, ವಿಗ್ರಹಗಳಲ್ಲಿ ಆಧುನಿಕತೆಯನ್ನೂ ಇಲ್ಲಿ ಕಾಣಬಹುದು. ಈ ಪೆಂಡಾಲ್‌ನ ಒಳಭಾಗ ಕೋಟೆ ಮತ್ತು ಕೋಟೆಯ ಒಳಾಂಗಣವನ್ನು ಹೋಲುತ್ತದೆ. ಕಳೆದ ವರ್ಷ ಇಲ್ಲಿ ಜೈಪುರದ ಶೀಶ್ ಮಹಲ್‌ನ ಪ್ರತಿಕೃತಿಯನ್ನು ರಚಿಸಲಾಗಿತ್ತು.
ಈ ಪೆಂಡಾಲ್ ಇರುವುದು ಕೋಲ್ಕತ್ತಾ ಕಾಲೇಜು ಸಮೀಪದ ಎಂ.ಜಿ ರಸ್ತೆಯಲ್ಲಿ ಸೆಂಟ್ರಲ್ ಮೆಟ್ರೋ ಇಲ್ಲಿಗೆ ಹತ್ತಿರದ ರೈಲು ನಿಲ್ದಾಣ. ಇದನ್ನೂ ಓದಿ: ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ