ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇದೆಯಾ? : ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯಿರಿ

Public TV
1 Min Read
FotoJet 1 9

ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಅವರ ಹತ್ತು ಫೋಟೋಗಳಿವೆಯಾ? ಸನ್ನಿ ಲಿಯೋನ್ ಫೇಸ್ ಬುಕ್ ಮತ್ತು ಇನ್ಸ್ಟಾ ಪೇಜ್ ಗಳನ್ನು ಫಾಲೋ ಮಾಡುತ್ತೀರಾ? ಸನ್ನಿ ಲಿಯೋನ್ ಅವರ ಎಲ್ಲ ಫೋಟೋಗಳಿಗೂ ಲೈಕ್ ಮತ್ತು ಕಾಮೆಂಟ್ ಮಾಡುತ್ತೀರಾ?

sunny leone 1

ಈ ಎಲ್ಲ ಪ್ರಶ್ನೆಗಳಿಗೆ ನೀವು ಹೌದು ಎನ್ನುವ ಉತ್ತರ ಕೊಟ್ಟರೆ, ಸೀದಾ ಮಂಡ್ಯಗೆ ಹೊರಟು ಬಿಡಿ. ಮಂಡ್ಯದ ಕರ್ನಾಟಕ ಬಾರ್ ವೃತ್ತದಲ್ಲಿ ಒಂದು ಚಿಕನ್ ಅಂಗಡಿಯಿದೆ. ಅಲ್ಲಿ ನಿಮಗಾಗಿ ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್ ವಿಶೇಷ ಉಡುಗೊರೆಯನ್ನು ನೀಡುತ್ತಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

SUNNY 1

ಇದು ತಮಾಷೆಯಲ್ಲ, ಮಂಡ್ಯದಲ್ಲಿರುವ ಸನ್ನಿ ಲಿಯೋನ್ ಅಭಿಮಾನಿಯೊಬ್ಬ ಮೇಲಿನ ಷರತ್ತುಗಳನ್ನು ಹಾಕಿ ಡಿಸ್ಕೌಂಡ್ ನಲ್ಲಿ ಚಿಕನ್ ಕೊಡಲು ಮುಂದಾಗಿದ್ದಾನೆ. ಅದು ವರ್ಷಪೂರ್ತಿ ಎನ್ನುವುದು ಮತ್ತೊಂದು ವಿಶೇಷ. ನೀವು ಈ ಡಿಸ್ಕೌಂಟ್ ಪಡೆಯಲು ಅರ್ಹರಾಗಬೇಕಿದ್ದರೆ ಮತ್ತೊಂದು ಸಲ ಅವನ ಷರತ್ತುಗಳನ್ನು ಓದಿಕೊಂಡು ಬಿಡಿ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

FotoJet 2 8

ಮಾದಕ ಬೆಡಗಿ ಸನ್ನಿ ಲಿಯೋನ್ ಅವರ ಅಪ್ಪಟ ಅಭಿಮಾನಿ ಪ್ರಸಾದ್. ಸನ್ನಿ ಲಿಯೋನ್ ಅವರ ಸಮಾಜಮುಖಿ ಕೆಲಸಗಳನ್ನು ನೋಡಿ, ಪ್ರಸಾದ್ ಅಭಿಮಾನಿಯಾಗಿದ್ದಾರೆ. ಈ ಅಭಿಮಾನಕ್ಕೋಸ್ಕರವಾಗಿ ಅವರು ಶೇ.10 ಪರ್ಸಂಟ್ ರಿಯಾಯತಿಯಲ್ಲಿ ಚಿಕನ್ ಕೊಡಲು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *