ಗಾಂಧಿನಗರ: ಗುಜರಾತ್ ಚುನಾವಣಾ (Gujarat Elections) ಪ್ರಚಾರದ ವೇಳೆ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ರಾವಣ ಎಂದು ಕರೆದಿರುವುದು ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಖರ್ಗೆ ಅವರು ಪದೇ-ಪದೇ ಗುಜರಾತಿನ ಮಗನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ.
मोदी जी प्रधानमंत्री हैं। वह काम छोड़कर नगर निगम का चुनाव, MLA का चुनाव, MP के चुनाव में प्रचार करते रहते हैं।
हर वक्त अपनी ही बात करते हैं – ‘आप किसी को मत देखो, मोदी को देखकर वोट दो।’
आपकी सूरत कितनी बार देखें? आपके कितने रूप हैं? क्या रावण की तरह 100 मुख हैं?
– @kharge जी pic.twitter.com/Iy6hYQfuhc
— Congress (@INCIndia) November 29, 2022
Advertisement
ಗುಜರಾತ್ ವಿಧಾನಸಭಾ ಚುನಾವಣೆಯ ಅಂಗವಾಗಿ ಅಹಮದಾಬಾದ್‌ನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಾ ಮೋದಿ ಹಾಗೂ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ: ಕಾಂಗ್ರೆಸ್
Advertisement
Unable to take the heat of Gujarat election, pushed to the fringe, Congress national president Mallikarjun Kharge loses control over his words, calls Prime Minister Narendra Modi “Ravan”.
From “Maut ka Saudagar” to “Ravan”, Congress continues to insult Gujarat and it’s son… pic.twitter.com/je5lkU4HBw
— Amit Malviya (@amitmalviya) November 29, 2022
Advertisement
ಮೋದಿ ಜೀ ಅವರು ಪ್ರಧಾನಿಯಾಗಿದ್ದಾರೆ, ಆದ್ರೆ ತಮ್ಮ ಕೆಲಸವನ್ನು ಮರೆತು ಮಹಾನಗರಪಾಲಿಕೆ, ಎಂಎಲ್‌ಎ ಹಾಗೂ ಎಂಪಿ ಚುನಾವಣೆಗಳಲ್ಲಿ (Elections) ಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲ ಸಮಯದಲ್ಲೂ ತಮ್ಮ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಮಾತ್ರ ನೋಡಿ ಈಗ ಬಿಜೆಪಿಗೆ ಮತ ನೀಡಬೇಕಾಗಿದೆ. ಮೋದಿ ಅವರೇ ನಾವು ಎಷ್ಟು ಬಾರಿ ನಿಮ್ಮ ಮುಖ ನೋಡೋದು? ನಿಮಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕುಕ್ಕೆಯಲ್ಲಿ ಮೊದಲ ಬಾರಿಗೆ ವ್ಯಾಪಾರದಿಂದ ದೂರ ಉಳಿದ ಮುಸ್ಲಿಂ ವ್ಯಾಪಾರಿಗಳು- ಸಂಘರ್ಷವಿಲ್ಲದೆ ಜಾತ್ರೆ ಸಂಪನ್ನ
Advertisement
ಬಿಜೆಪಿ ಅವರು ಪ್ರತಿ ಚುನಾವಣೆಯಲ್ಲೂ ಪ್ರಧಾನಿ ಮೋದಿ ಹೆಸರಿನಲ್ಲೇ ಮತ ಕೇಳುತ್ತಿದ್ದಾರೆ. ಅದನ್ನು ಬಿಟ್ಟು ಆಯಾ ಚುನಾವಣಾ ಅಭ್ಯರ್ಥಿಗಳ ಹೆಸರಿನಲ್ಲೇ ಮತ ಕೇಳಿ. ಮೋದಿ ಅವರು ಪುರಸಭೆಗೆ ಬಂದು ಕೆಲಸ ಮಾಡುತ್ತಾರೆಯೇ? ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತಲೆ ಹೊಡೆದವರು, ಮನೆ ಹಾಳು ಮಾಡೋರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ – HDK
ಪ್ರಧಾನಿ ನರೇಂದ್ರ ಮೋದಿ ಅವರನ್ನ ರಾವಣ ಎಂದು ಕರೆದಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಗುಜರಾತ್ ಅನ್ನು ಅವಮಾನಿಸುತ್ತಲೇ ಇದೆ ಎಂದು ಕಿಡಿ ಕಾರಿದೆ.