ಕ್ರಿಸ್‌ಮಸ್ ಅಂದ್ರೆ ಕ್ರೈಸ್ತರಿಗೆ ಬಹಳ ಸಂಭ್ರಮ, ಸಡಗರ. ವರ್ಷದ ಕೊನೆಯಲ್ಲಿ ಬರುವ ಹಬ್ಬಕ್ಕಾಗಿ ಕ್ರೈಸ್ತ ಬಾಂಧವರು ವರ್ಷಪೂರ್ತಿ ಕಾಯುತ್ತಾರೆ. ಕ್ರಿಸ್‌ಮಸ್ ಟ್ರೀ ತಂದು ಸಿಂಗರಿಸುವುದು, ಮನೆಯಲ್ಲಿ ಮತ್ತು ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ, ಯೇಸುಕ್ರಿಸ್ತನ ಹುಟ್ಟುಹಬ್ಬವನ್ನ ಸಂಭ್ರಮಿಸಲಾಗುತ್ತದೆ. ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಮುನ್ನಾದಿನ ರಾತ್ರಿ ವಿಶೇಷ ಪೂಜೆ, ಪ್ರಾರ್ಥನೆ ಇರುತ್ತದೆ. ಕ್ರೈಸ್ತರು ಕೇಕ್ ಹಂಚುವ ಮೂಲಕ ಕ್ರಿಸ್‌ಮಸ್ ಆಚರಿಸುತ್ತಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ರೂಪದಲ್ಲಿ, ಹಲವು ಪದ್ಧತಿ ಮತ್ತು ಪ್ರಕಾರಗಳ ಮೂಲಕ ಕ್ರಿಸ್‌ಮಸ್ ಆಚರಿಸಲಾಗುತ್ತದೆ.
ಇದೊಂದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ, ಪ್ರೀತಿ ಹಂಚಿಕೊಳ್ಳುವ ಮೂಲಕ ಆಚರಿಸುವ ಹಬ್ಬವಾಗಿದೆ. ಈ ಹಬ್ಬದ ದಿನದಂದು ಕ್ರೈಸ್ತ ಬಾಂಧವರು ಮುಂಜಾನೆಯೇ ಚರ್ಚ್‌ಗಳಿಗೆ ಭೇಟಿ ನೀಡಿ ಅವರ ದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಚರ್ಚ್‌ಗಳಲ್ಲಿ ಮತ್ತು ಮನೆಗಳಲ್ಲಿ ಕ್ಯಾಂಡಲ್ ಹಚ್ಚುವ ಮೂಲಕ ಹಬ್ಬ ಪ್ರಾರಂಭಿಸುತ್ತಾರೆ. ಮನೆಯಲ್ಲಿ ಕೇಕ್, ಚಾಕೋಲೇಟ್‌ಗಳಂತಹ ಸಿಹಿ ತಯಾರಿಸಿ ಹಂಚುವ ಮೂಲಕ ತಮ್ಮ ಪ್ರೀತಿ, ಬಾಂಧವ್ಯ ಗಟ್ಟಿ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಪ್ರೀತಿ ಪಾತ್ರರಿಗೆ, ಸಂಬಂಧಿಕರಿಗೆ ಬಂಧುಗಳಿಗೆ ಶುಭಾಶಯ ತಿಳಿಸುತ್ತಾರೆ. ನಿಮಗೂ ಶುಭಾಶಯ ಹಂಚಿಕೊಳ್ಳುವ ಆಸೆಯಿದ್ದರೆ.. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ… ಮುಂದೆ ಓದಿ…
2025ರ ಕ್ರಿಸ್‌ಮಸ್ ಹಬ್ಬದ ಶುಭಾಶಯಕ್ಕೆ ಕೋಟ್ಸ್
1. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ 2024ರ ಹಾರ್ದಿಕ ಶುಭಾಶಯಗಳು.
2. ನಾಡಿನ ಸಮಸ್ತ ಜನತೆಗೆ ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
3. ಈ ವರ್ಷದ ಕ್ರಿಸ್‌ಮಸ್‌ಹಬ್ಬ ನಿಮ್ಮ ಬಾಳಲ್ಲಿ ಪ್ರೀತಿ, ಶಾಂತಿ ಮತ್ತು ಸಂತೋಷ ತುಂಬಲಿ… ಎಲ್ಲರಿಗೂ ಮೇರಿ ಕ್ರಿಸ್‌ಮಸ್.
4. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
5. ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ, ತ್ಯಾಗ, ಕರುಣೆಗಳ ಸಾಕಾರ ಮೂರ್ತಿ ಏಸುಕ್ರಿಸ್ತನ ಜನ್ಮದಿನವಾದ ಇಂದು ಎಲ್ಲರಿಗೂ ಆಯಸ್ಸು ಶುಭವನ್ನು ತರಲಿ. ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
6. ಈ ವರ್ಷದ ಕ್ರಿಸ್‌ಮಸ್‌ನೊಂದಿಗೆ ಹಳೆಯ ವರ್ಷಕ್ಕೆ ವಿದಾಯ ಹೇಳೋಣ. ಮುಂದಿನ ಹೊಸ ವರ್ಷಕ್ಕೆ ಶುಭ ಕೋರುತ್ತಾ ಎಲ್ಲವನ್ನು ಸಕಾರಾತ್ಮಕತೆಯಿಂದಲೇ ತೆಗೆದುಕೊಳ್ಳೋಣ. ಪ್ರತಿಯೊಬ್ಬರಿಗೂ ಕ್ರಿಸ್‌ಮಸ್ 2024ರ ಮತ್ತು 2025 ಹೊಸ ವರ್ಷದ ಶುಭಾಶಯಗಳು.
7. ಯೇಸು ಕ್ರಿಸ್ತನು ನಿಮ್ಮ ಬಾಳಿನಲ್ಲಿ ಬಯಸಿದ್ದೆಲ್ಲವನ್ನ ಕರುಣಿಸಲಿ.. ಕ್ರಿಸ್‌ಮಸ್ 2024ರ ಹಾರ್ದಿಕ ಶುಭಾಶಯಗಳು.
8. ಯೇಸು ಕ್ರಿಸ್ತನ ಆಶೀರ್ವಾದ ಪ್ರತಿಯೊಬ್ಬರ ಮೇಲೂ ಇರಲಿ.. ಕ್ರಿಸ್‌ಮಸ್ 2024ರ ಶುಭಾಶಯಗಳು.
9. ನಿಮ್ಮೆಲ್ಲಾ ಒತ್ತಡವು ಮರೆಯಾಗಲಿ, ನಿಮ್ಮ ಹೃದಯವು ಶಾಂತಿ ಮತ್ತು ಐಶ್ವರ್ಯದಿಂದ ತುಂಬಿರಲಿ.. ಮೇರಿ ಕ್ರಿಸ್‌ಮಸ್ 2024.
10. ಕ್ರಿಸ್‌ಮಸ್ ಟ್ರೀ ಯಂತೆ ಬದುಕು ಸದಾ ಸುಂದರವಾಗಿರಲಿ, ಕ್ರಿಸ್‌ಮಸ್ ಮೇಣದ ಬತ್ತಿಯ ಬೆಳಕಿನಂತೆ ಬದುಕಿನಲ್ಲಿ ಸದಾ ಬೆಳಕು ತುಂಬಿರಲಿ, ಕ್ರಿಸ್‌ಮಸ್ ಕೇಕಿನ ಸಿಹಿಯಂತೆ ಬದುಕಿನ ತುಂಬಾ ಸಿಹಿ ಇರಲಿ ಎಂದು ಹಾರೈಸುತ್ತಾ ಕ್ರಿಸ್‌ಮಸ್ 2024ರ ಶುಭಾಶಯಗಳು.
11. ನಿಮ್ಮ ಜೀವನದಲ್ಲಿ ಸದಾ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿ ತುಂಬಿರಲಿ. ಯೇಸುಕ್ರಿಸ್ತನು ಸದಾ ನಿಮಗೆ ಒಳಿತನ್ನೇ ಮಾಡಲಿ.. ಕ್ರಿಸ್‌ಮಸ್ 2024ರ ಹಾರ್ದಿಕ ಶುಭಾಶಯಗಳು.
12. ಯೇಸುವಿನ ಕೃಪೆಯಿಂದ ಕಷ್ಟಗಳೆಲ್ಲಾ ಮಂಜಿನಂತೆ ಕರಗಲಿ. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೂ ಕ್ರಿಸ್‌ಮಸ್ 204ರ ಹಾರ್ದಿಕ ಶುಭಾಶಯಗಳು.