ನವದೆಹಲಿ: ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ನನಗೂ ಐದು ಜನ ಮಕ್ಕಳು ಎಂದು ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟಾಂಗ್ ಕೊಟ್ಟಿದ್ದಾರೆ.
ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಬಣ ಬಹುಮತದತ್ತ ಸಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಹತಾಶರಾಗಿದ್ದಾರೆ. ಪ್ರಧಾನಿ ಈಗ ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತನಾಡಲು ಇದೇ ಕಾರಣ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ
ನಾವು ಬಹುಮತದತ್ತ ಸಾಗುತ್ತಿದ್ದೇವೆ. ಅದಕ್ಕಾಗಿಯೇ ಅವರು (ಮೋದಿ) ಈಗ ‘ಮಂಗಳಸೂತ್ರ’ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಸಂಪತ್ತನ್ನು ಕದ್ದು ಹೆಚ್ಚು ಮಕ್ಕಳಿರುವವರಿಗೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ಬಡವರು ಯಾವಾಗಲೂ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.
ಬಡವರು (ಹೆಚ್ಚು) ಮಕ್ಕಳನ್ನು ಹೊಂದಿದ್ದಾರೆ. ಏಕೆಂದರೆ ಅವರ ಬಳಿ ಸಂಪತ್ತು ಇಲ್ಲ. ಆದರೆ ನೀವು (ಪ್ರಧಾನಿ ಮೋದಿ) ಮುಸ್ಲಿಮರ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ? ಮುಸ್ಲಿಮರು ಈ ದೇಶದವರು ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್‍ಗೆ ಮತ್ತೆ ಶಾಕ್- ಇಂದು ಮತ್ತಿಬ್ಬರು ರಾಜೀನಾಮೆ
ನನಗೂ ಐವರು ಮಕ್ಕಳು. ಆದರೆ ನನ್ನ ತಂದೆ-ತಾಯಿಗೆ ನಾನೊಬ್ಬನೇ ಮಗ. ನಮ್ಮ ಮನೆಗೆ ಬೆಂಕಿ ಬಿದ್ದಾಗ ತಾಯಿ, ಸಹೋದರಿ ಮತ್ತು ಚಿಕ್ಕಪ್ಪ ಸತ್ತರು ಎಂದು ತಮ್ಮ ಕುಟುಂಬದಲ್ಲಾದ ಪೂರ್ವ ದುರಂತ ನೆನಪಿಸಿಕೊಂಡಿದ್ದಾರೆ. ನೀನು ನನ್ನ ಏಕೈಕ ಮಗ ಎಂದು ನಮ್ಮ ತಂದೆ ನನಗೆ ಹೇಳುತ್ತಿದ್ದರು. ನನ್ನ ಮಕ್ಕಳನ್ನು ನೋಡಲು ಅವರು ಬಯಸಿದ್ದರು ಎಂದು ತಿಳಿಸಿದ್ದಾರೆ.