ಬೆಂಗಳೂರು: ರಾಜಕಾರಣಕ್ಕೆ ಬರಲ್ಲ ಆದರೆ ಒಳ್ಳೆಯ ಅಭ್ಯರ್ಥಿಗೆ ಸರ್ಪೋಟ್ ಮಾಡುತ್ತೀನಿ ಅಂತ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದರು. ಆದ್ರೆ ಈಗ ಅವರು ಹೊಸ ಸೆನ್ಸೇಷನ್ ಸ್ಟೇಟ್‍ಮೆಂಟ್ ಕೊಟ್ಟಿದ್ದಾರೆ.
ಪತ್ರಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು, ರಾಜಕಾರಣಿಗಳು ಚುನಾವಣಾ ಪ್ರಚಾರ ಅಂದ್ರೆ ಬರೀ ಕೋಟಿ ಕೋಟಿ ಹಣ ಖರ್ಚು ಮಾಡಿ, ದೊಡ್ಡ ದೊಡ್ಡ ಸಮಾವೇಷ ಮಾಡುವುದು ಅಷ್ಟೆ ಎಂದುಕೊಂಡಿದ್ದಾರೆ. ಒಬ್ಬ ಅಭ್ಯರ್ಥಿಗೆ ತಾನು ಸ್ಫರ್ಧಿಸುವ ಕ್ಷೇತ್ರಕ್ಕೆ ಏನು ಬೇಕು. ತಾನೂ ಏನು ಕೆಲಸ ಮಾಡಬೇಕು ಅನ್ನೋದೆ ಗೊತ್ತಿರುವುದಿಲ್ಲ. ಇಂಥವರನ್ನ ಜನ ತಿರಸ್ಕರಿಸಬೇಕು. ಮತದಾನ ಅನ್ನೋ ಪವರ್ ಫುಲ್ ಕಾರ್ಯವನ್ನು ಜನಸಾಮಾನ್ಯರು ಸಮರ್ಥ ವ್ಯಕ್ತಿಗೆ ಸಲ್ಲಿಸಬೇಕು. ಆಗಲೇ ಉತ್ತಮ ನಗರ, ಅತ್ಯುತ್ತಮ ನಾಡು, ಅದ್ಭುತ ದೇಶ ಕಟ್ಟಲು ಸಾಧ್ಯವೆಂದು ಮತದಾರರಿಗೆ ಸಲಹೆ ಕೊಟ್ಟಿದ್ದಾರೆ.
Advertisement
Advertisement
ಯಾವುದಾದರೂ ಅಥವಾ ಯಾರಾದ್ರೂ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೊಂದಿಷ್ಟು ಕನಸುಗಳಿವೆ, ಜನರನ್ನು ಸಬಲರಾಗಿಸಬೇಕು. ಯಾರು ಸಮರ್ಥ ಅಭ್ಯರ್ಥಿ ಎಂದು ನನ್ನ ವಿವೇಚನೆ ಬಂದರೆ ಖಂಡಿತ ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಆದರೆ ಇನ್ನು ಅಂತಹ ಅಭ್ಯರ್ಥಿ ಸಿಕ್ಕಿಲ್ಲ ಅಂತ ಹೇಳಿದ್ರು.
Advertisement
ಎಲೆಕ್ಷನ್‍ನಲ್ಲಿ ಗೆಲ್ಲಿಸಿದ ಪ್ರತಿನಿಧಿಯನ್ನು ಸುಮ್ನೆ ಬಿಟ್ಟು ಬಿಡುವುದಲ್ಲ. ಪ್ರತಿವಾರ, ಪ್ರತಿತಿಂಗಳು ಟಾರ್ಗೆಟ್ ಕೊಡಬೇಕು. ಆಯಾ ಕಾಲದಲ್ಲಿ ಆಗಬೇಕಾದ ಕೆಲಸ ಆಗಿಲ್ಲವೆಂದರೆ ಆ ಕ್ಷೇತ್ರದ ಹಿರಿಯರು, ಪ್ರಜ್ಞಾವಂತರು ಸಂಘಟನೆ ಮಾಡಿಕೊಂಡು ಪ್ರತಿನಿಧಿಯನ್ನ ಹಾಕ್ಕೊಂಡು ರುಬ್ಬಬೇಕು ಅಂದಿದ್ದಾರೆ.
Advertisement
ಈಗ ನಡೆಯುತ್ತಿರುವ ಪ್ರಚಾರ ಹಾಗೂ ರಾಜಕಾರಣಿಗಳು ಪ್ರಚಾರ ನಡೆಸುತ್ತಿರುವ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳು ಕ್ಷೇತ್ರದ ಬಗ್ಗೆ, ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ, ಯುವಕರ ಉದ್ಯೋಗ ಸೃಷ್ಠಿ ಇಂಥಹ ವಿಚಾರಗಳಿಗೆ ಭರವಸೆ ಮಾತುಗಳನ್ನ ಆಡುತ್ತಿಲ್ಲ. ಬದಲಾಗಿ ಆ ಪಕ್ಷದವರು ಅಷ್ಟು ಭ್ರಷ್ಟಚಾರ ಮಾಡಿದ್ದಾರೆ. ಈ ಅಭ್ಯರ್ಥಿ ಅಷ್ಟು ಅಕ್ರಮ ಮಾಡಿದ್ದಾನೆ ಎಂದು ಕೆಸರೆರೆಚಾಟ ಮಾಡುತ್ತಿದ್ದಾರೆ ಹೊರತು ಆಯಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಇವೆಲ್ಲಾ ನಾನ್ ಸೆನ್ಸ್ ಅಂತ ಗರಂ ಆಗಿದ್ದಾರೆ.
ನಾಡಿನಾದ್ಯಂತ ಎಲೆಕ್ಷನ್ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿಯಲು ಫೇಮಸ್ ಸೆಲಬ್ರಿಟಿಗಳ ಮನೆ ಬಾಗಿಲು ಬಡೆಯುತ್ತಿವೆ. ಸ್ಯಾಂಡಲ್ ವುಡ್‍ನ ಕಲಾವಿದರ ಪೈಕಿ ಯಶ್ ಕೂಡ ಸಖತ್ ಫಾರ್ಮ್‍ನಲ್ಲಿರುವ ನಾಯಕ ನಟ. ಹೀಗಾಗಿ ಯಶ್ ಅವರಿಗೆ ಸಾಕಷ್ಟು ಆಫರ್ ಗಳು ಪ್ರಮುಖ ಪಕ್ಷಗಳಿಂದ ಹೋಗಿದೆ. ಆದ್ರೆ ಸದ್ಯಕ್ಕೆ ಯಶ್ ಅವರು ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ `ಕೆಜಿಎಫ್’ ಚಿತ್ರದ ಕಟ್ಟಕಡೆಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.