ಮಂಡ್ಯ: ರಣಭಯಂಕರ ಬರಗಾಲ ಇದ್ದರೂ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡದ ಸಿಎಂ ಸಿದ್ದರಾಮಯ್ಯನವರಿಗೆ ಈಗ ಅನ್ನದಾತರ ಮೇಲೆ ಪ್ರೀತಿ ಉಕ್ಕಿದಂತಿದೆ. ಮಳವಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ವೇಳೆ ಮಾತನಾಡಿ, ಮಳೆ-ಬೆಳೆ ಆಗುವವರೆಗೂ ರೈತರ ಸಾಲ ವಸೂಲಿ ಮಾಡಬೇಡಿ, ನೋಟಿಸ್ ನೀಡಬೇಡಿ ಅಂತ ಬ್ಯಾಂಕ್‍ಗಳಿಗೆ ಸೂಚಿಸಿದ್ದಾರೆ.
ಬಲವಂತವಾಗಿ ಸಾಲ ವಸೂಲಿ ಮಾಡಿದ್ರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ. ಇದೇ ವೇಳೆ ಸಾಲಮನ್ನಾ ಬಗ್ಗೆ ರೈತರು ಪ್ರಶ್ನಿಸಿದ್ದಕ್ಕೆ, ಸಾಲಮನ್ನಾ ಮಾಡಲು ನಾನು ಸಿದ್ಧ. ಆದ್ರೆ, ಕೇಂದ್ರ ಸರ್ಕಾರ ಮುಂದೆ ಬರುತ್ತಿಲ್ಲ. ಪ್ರಧಾನಿ ಮೋದಿ ಅವರಿಗೂ ಮನವಿ ಮಾಡಿದ್ದೇನೆ. ಸರ್ವಪಕ್ಷ ಸಭೆಯಲ್ಲಿ ಬಿಜೆಪಿಯವರು ತುಟಿನೇ ಬಿಚ್ಚಲಿಲ್ಲ ಅಂತ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
2018ರಲ್ಲಿ ಬಿಜೆಪಿಯವರು ಅವರಪ್ಪನಾಣೆ ಗೆಲ್ಲಲ್ಲ ಅಂದ್ರು. ಇನ್ನು, ವೇದಿಕೆಯಲ್ಲಿ ನಿದ್ದೆಗೆ ಜಾರಿದ್ದಾಗ ಕನ್ನಡಕ ಜಾರಿಬಿತ್ತು. ಅಲ್ಲದೆ, ಕಾಫಿಯನ್ನೂ ಮೇಲೆ ಚೆಲ್ಲಿಕೊಂಡ್ರು.
Advertisement
ಇದಕ್ಕೂ ಮುನ್ನ, ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ತೋರಿಸಿ, ಮುತ್ತಿಗೆ ಹಾಕಿದ್ರು. ಪ್ರತಿಭಟನೆ ಹತ್ತಿಕ್ಕಲು ವಿಫಲರಾದ ಮಂಡ್ಯ ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿಗೆ ಸಿಎಂ ಅಲ್ಲೇ ಕ್ಲಾಸ್ ತಗೊಂಡ್ರು.
Advertisement
ಸಿಎಂ ಅವ್ರನ್ನ ಮೈಸೂರಿಗೆ ಬಿಟ್ಟು, ವಾಪಸ್ ಬೆಂಗಳೂರಿಗೆ ಬರುವಾಗ ಸಚಿವರಾದ ಶಿವಕುಮಾರ್, ಜಯಚಂದ್ರ ಮತ್ತು ಎಂಬಿ ಪಾಟೀಲ್ ಅವರಿದ್ದ ಹೆಲಿಕಾಪ್ಟರ್‍ಗೆ ಗಾಳಿ-ಮಳೆ ಅಡ್ಡಿಯಾದ ಕಾರಣ ಮೈಸೂರಿಗೆ ಹಿಂತಿರುಗಿದ್ರು.
Advertisement
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಆಗಿದೆ ನೀವ್ಯಾಕೆ ಮಾಡಲ್ಲ ಪ್ರಶ್ನೆಗೆ ಸಿಎಂ ಉತ್ತರ ಇದು
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಲ್ಲಗಹಳ್ಳಿ ಬೋರೆ ಗ್ರಾಮದಲ್ಲಿ ಪೂರಿಗಾಲಿ ಏತ ನೀರಾವರಿ, ಹನಿ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭ. pic.twitter.com/jyWW8OAvsi
— CM of Karnataka (@CMofKarnataka) April 20, 2017
ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಸಂದರ್ಭ. pic.twitter.com/oWEIh2Loj4
— CM of Karnataka (@CMofKarnataka) April 20, 2017